ಚಂಡಮಾರುತದ ಅಪಾಯದಲ್ಲಿ 5 ರಾಜ್ಯಗಳು; ರಾಜ್ಯದ 19 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!

ಕರ್ನಾಟಕ ಸೇರಿದಂತೆ ಅಸ್ಸಾಂ, ಆಂಧ್ರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ರಾಜ್ಯಗಳು ಚಂಡಮಾರುತಗಳಿಂದ ಹೆಚ್ಚು ಅಪಾಯಕ್ಕೆ ಒಳಗಾಗಲಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಅ. 29 ಮತ್ತು 30ರಂದು ಈ ಭಾಗಗಳಲ್ಇ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ದೆಹಲಿ ಮೂಲಕ ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್‌ ವಾಟರ್ ಸಂಸ್ಥೆ ಬಿಡುಗಡೆ ಮಾಡಿದ ಹವಾಮಾನ ಸಂವೇದನಾ ಸೂಚ್ಯಂಕದ ಪ್ರಕಾರ, 80% ಭಾರತೀಯರು ಹವಾಮಾನ ವೈಪರಿತ್ಯದಿಂದ ಅಪಾಯ ಎದುರಿಸಲಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ 463 ಜಿಲ್ಲೆಗಳು ಅತಿವೃಷ್ಟಿ, ಬರ ಮತ್ತು ಚಂಡಮಾರುತದ ಅಪಾಯದಲ್ಲಿವೆ. ಇವುಗಳಲ್ಲಿ 183 ಜಿಲ್ಲೆಗಳು ಹಾಟ್‌ಸ್ಪಾಟ್‌ಗಳಾಗಿವೆ ಎಂದು ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆ (WMO)ಯ ವರದಿಯ ಪ್ರಕಾರ ಚಂಡಮಾರುತ, ಪ್ರವಾಹ ಮತ್ತು ಬರಗಾಲದಂತಹ ನೈಸರ್ಗಿಕ ವಿಕೋಪಗಳಿಂದ ಕಳೆದ ವರ್ಷ ಭಾರತವು 6,535 ಶತಕೋಟಿ ರೂಪಾಯಿ ನಷ್ಟವನ್ನ ಅನುಭವಿಸಿದೆ.

ಇದನ್ನೂ ಓದಿ: ಮೃಗಾಲಯಗಳು, ರಕ್ಷಣಾ ಕೇಂದ್ರಗಳು ಕಾಡು ಪ್ರಾಣಿಗಳಿಗೆ ಜೈಲುಗಳಿದ್ದಂತೆ: ತಜ್ಞರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights