ರೆಸ್ಟೋರೆಂಟ್ ಗೆ ನುಗ್ಗಿದ ಚರಂಡಿ ನೀರಿನಲ್ಲಿ ಕುಳಿತು ಆಹಾರ ಸೇವಿಸಿದ ಜನ : ವಿಡಿಯೋ ವೈರಲ್!
ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹೈದರಾಬಾದ್‌ನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಿಗೆ, ಮನೆಗಳಿಗೆ ಹಾಗೂ ರೆಸ್ಟೋರೆಂಟ್ ಗೆ ಪ್ರವಾಹದಂತೆ ನೀರು ನುಗ್ಗಿದೆ. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಗರದಲ್ಲಿ ರಾತ್ರಿ 8:30 ರಿಂದ 11 ಗಂಟೆಯ ನಡುವೆ 10ರಿಂದ12 ಸೆಂಮೀ ಮಳೆಯಾಗಿದೆ. ಇದರಿಂದಾಗಿ ಹಲವಾರು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆನೀರು ನುಗ್ಗಿದೆ. ಈ ಮಧ್ಯೆ ಓಲ್ಡ್ ಸಿಟಿಯಲ್ಲಿ ಪ್ರವಾಹಕ್ಕೆ ಒಳಗಾಗಿರುವ ರೆಸ್ಟೋರೆಂಟ್‌ನ ವೀಡಿಯೊವನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದ್ದು, ಗ್ರಾಹಕರು ರೆಸ್ಟೋರೆಂಟ್ ಒಳಗೆ ಮಳೆನೀರಿನ ಮಧ್ಯೆ ಆಹಾರ ಸೇವಿಸುತ್ತಿರುವುದು ಕಂಡುಬಂದಿದೆ.
#WATCH | Telangana: Rainwater entered a restaurant in Old City after incessant rains lashed Hyderabad, yesterday pic.twitter.com/ACLKd1Vb19
— ANI (@ANI) October 9, 2021
ನಿವಾಸಿಗಳು ಹಂಚಿಕೊಂಡ ಇತರ ವೀಡಿಯೋಗಳು ಲೇನ್‌ಗಳಲ್ಲಿ ನಿಲ್ಲಿಸಿದ ಕಾರುಗಳು ತೇಲುತ್ತಿರುವುದನ್ನು ಮತ್ತು ಮಳೆ ನೀರು ಪ್ರವಾಹ ಇತರ ಪ್ರದೇಶಗಳಲ್ಲಿ ಕೊಚ್ಚಿಕೊಂಡು ಹೋಗುವುದನ್ನು ತೋರಿಸಿದೆ.
#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021
ಚಿಂತಲಕುಂಟಾದಲ್ಲಿ ಓರ್ವ ವ್ಯಕ್ತಿ ಪ್ರವಾಹಕ್ಕೆ ಸಿಲುಕಿ ಆತನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನಿಬ್ಬರು ವನಸ್ಥಾಲಿಪುರದಲ್ಲಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ನಾಲೆಗಳು ಉಕ್ಕಿ ಹರಿದು ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ. ರಕ್ಷಣಾ ತಂಡ ಅವರಿಗಾಗಿ ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.