ತಾಲಿಬಾನ್ ರಾಕೇಟ್ ದಾಳಿಗೆ ಪ್ರತಿಯಾಗಿ ಅಮೇರಿಕಾ ಏರ್ ಸ್ಟ್ರೈಕ್ : 9 ಜನ ಸಾವು!

ಕಾಬೂಲ್ ಏರ್ ಪೋರ್ಟ್ ಮೇಲೆ ರಾಕೇಟ್ ದಾಳಿ ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಅಮೇರಿಕಾ ಸೇನೆ ಏರ್ ಸ್ಟ್ರೈಕ್ ಮಾಡಿದ್ದು ದಾಳಿಯಲ್ಲಿ 6 ಜನ ಮಕ್ಕಳು ಸೇರಿ ಒಟ್ಟು 9 ಜನ ಬಲಿಯಾಗಿದ್ದಾರೆ.

ಐದು ರಾಕೇಟ್ ದಾಳಿಯನ್ನು ತಡೆಯಲು ಅಮೇರಿಕಾ ವಾಪಸ್ಸು ದಾಳಿ ಮಾಡಿದೆ. ಅಮೇರಿಕ ಸೇನೆ ಮಾಡಿದ ದಾಳಿಯಲ್ಲಿ 6 ಚಿಕ್ಕ ಮಕ್ಕಳುಸೇರಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಮೆರಿಕಾ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳನ್ನು ಸ್ಥಳಾಂತರಿಸಿದ್ದವು. ಇನ್ನು ಅಮೆರಿಕಾದಿಂದ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುವ್ಯ ದಿಕ್ಕಿನಲ್ಲಿ ರಾಕೆಟ್ ದಾಳಿ ನಡೆದಿದ್ದು 9 ಜನ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿತ್ತು. ಪರಿಣಾಮ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ರಾಕೆಟ್ ದಾಳಿ ನಡೆದಿದೆ.

ಕಾಬೂಲ್ ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವ ಅಪಾಯವಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಕೆಟ್ ದಾಳಿ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights