ಅರ್ಚರಿ ವಿಶ್ವಕಪ್: ಒಂದೇ ದಿನ 3 ಚಿನ್ನದ ಪದಕ ಗೆದ್ದ ದೀಪಿಕಾ ಕುಮಾರಿ!
ಭಾರತದ ಖ್ಯಾತ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಪ್ಯಾರಿಸ್ನಲ್ಲಿ ನಡೆಯುತ್ತಿರುವ ಅರ್ಚರಿ ವಿಶ್ವಕಪ್ನಲ್ಲಿ ಭಾನುವಾರ ಒಂದೇ ದಿನ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ದೀಪಿಕಾ ಅವರು ಮಹಿಳಾ ವೈಯಕ್ತಿಕ, ತಂಡ ಮತ್ತು ಮಿಶ್ರ ಜೋಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಮೂರು ಸ್ಪರ್ಧೆಗಳಲ್ಲಿಯೂ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಅವರು ತಮ್ಮಮಹಿಳೆಯರ ವೈಯಕ್ತಿಕ ಸ್ಪರ್ಧೆಯ ಫೈನಲ್ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು 6-0 ಅಂತರದಲ್ಲಿ ಸೋಲಿಸಿ ಚಿನ್ನವನ್ನು ಗೆದ್ದಕೊಂಡಿದ್ದಾರೆ. ಇದಕ್ಕೂ ಮೊದಲು ಫ್ರೆಂಚ್ ಕ್ಯಾಪಿಟಲ್ನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ತಂಡದ ಭಾಗವಾಗಿದ್ದ ಅವರು ಚಿನ್ನ ಗೆದ್ದಿದ್ದಾರೆ.
ಅಲ್ಲದೆ, ಮಿಶ್ರ ಆಟದಲ್ಲಿ ದೀಪಿಕಾ ಮತ್ತು ಅವರ ಪತಿ ಅಟಾನು ದಾಸ್ ಅವರು ಮಿಶ್ರ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ನ ಜೋಡಿಯನ್ನು 5-3ರಿಂದ ಸೋಲಿಸಿ ಮತ್ತೊಂದು ಚಿನ್ನವನ್ನು ಗೆದ್ದುಕೊಂಡಿದ್ದಾರೆ.
“ನನಗೆ ಸಂತೋಷವಾಗಿದೆ. ಇದೇ ಸಮಯದಲ್ಲಿ ನಾನು ನನ್ನ ಅಟದ ಪ್ರದರ್ಶವನ್ನು ಇದೇ ರೀತಿಯಲ್ಲಿ ಮುಂದುವರೆಸಬೇಕಿದೆ. ಏಕೆಂದರೆ, ಮುಂಬರು ಒಲಿಂಪಿಕ್ಸ್ ಪಂದ್ಯಾವಳಿ ನಮಗೆ ಬಹುಮುಖ್ಯವಾಗಿದೆ. ಒಲಿಂಪಿಕ್ಸ್ನಲ್ಲಿ ಭಾರತವು ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದಿಲ್ಲ. ಈ ಬಾರಿ ನಾನು ಅದಕ್ಕಾಗಿ ಪ್ರಯತ್ನಿಸಬೇಕು. ಹೀಗಾಗಿ ನಾನು ನನ್ನ ಕಲಿಕೆಯನ್ನು ಮತ್ತಷ್ಟು ಹೆಚ್ಚಿಸಬೇಕು” ಎಂದು ದೀಪಿಕಾ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಸಹ ಸ್ಪರ್ಧಿಯ ಕೈಹಿಡಿದು ರೇಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು : ನೆಟ್ಟಿಗರಿಂದ ಮೆಚ್ಚುಗೆ!