ನೇಪಾಳದಲ್ಲಿ ಉಕ್ಕುತ್ತಿದೆ ಪ್ರವಾಹ; 07 ಜನರ ಸಾವು; ಭಾರತೀಯರು ಸೇರಿ 50ಕ್ಕೂ ಹೆಚ್ಚು ಜನರು ನಾಪತ್ತೆ!

ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಕ್ಕಿ ಹರಿಯುತ್ತಿದೆ. ದುರಂತದಲ್ಲಿ ಇದೂವರೆಗೂ 7 ಮಂದಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, 3 ಭಾರತೀಯರೂ ಸೇರಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೂವರೆಗೂ ಕನಿಷ್ಠ 50 ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ನಾಪತ್ತೆಯಾಗಿರುವ ಎಲ್ಲರೂ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ಹೇಳಲಾಗಿದೆ.

ನೇಪಾಳದ ಮೇಲಮ್ಚಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಸಿಂಧುಪಾಲಚೋಕ್ ಪ್ರಾಂತ್ಯದಲ್ಲಿ ಪ್ರವಾಹ ಉಂಟಾಗಿದೆ. ಮೇಲಮ್ಚಿ ನಗರದ 200 ಮನೆಗಳು ಪ್ರವಾಹಕ್ಕೆ ಆಹುತಿಯಾಗಿದ್ದು, ನಿನ್ನೆ ತಡರಾತ್ರಿ 7 ಮೃತದೇಹಗಳು ದೊರೆತಿವೆ. ಇನ್ನೂ ಹಲವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

ಮೆಲಮ್ಚಿ ಮತ್ತು ಇಂದ್ರಾವತಿ ನದಿಗಳ ಪ್ರವಾಹದಲ್ಲಿ 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಮೆಲಮ್ಚಿ ಕುಡಿಯುವ ನೀರಿನ ಯೋಜನೆ, ಟಿಂಬು ಬಜಾರ್, ಚಾನೌಟೆ ಬಜಾರ್, ತಲಮರಂಗ್ ಬಜಾರ್ ಮತ್ತು ಮೆಲಮ್ಚಿ ಬಜಾರ್‌ನಲ್ಲೂ ಅಣೆಕಟ್ಟಿಗೆ ಹಾನಿಯಾಗಿದೆ ಎಂದು ನೇಪಾಳದ ಸಚಿವ ಶೇರ್ ಬಹದ್ದೂರ್ ತಮಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ತಾಯಿಯ ಸಂದೇಶ: ನಾನು ಹೆಮ್ಮೆಪಡುತ್ತೇನೆ; ದೆಹಲಿ ಹೈಕೋರ್ಟ್‌ನ ತೀರ್ಪು ಭಾರತದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights