ಮಿಸ್ ಯೂನಿವರ್ಸ್ ರನ್ನರ್ ಅಪ್ ಆಡ್ಲೈನ್ ಕ್ಯಾಸ್ಟೆಲಿನೊ ಅವರಂತೆ ಕಾಣುವ ಗೊಂಬೆ ಕಂಡು ಫ್ಯಾನ್ಸ್ ಫಿದಾ!
ಮಿಸ್ ಯೂನಿವರ್ಸ್ ರನ್ನರ್ ಅಪ್ ಆಡ್ಲೈನ್ ಕ್ಯಾಸ್ಟೆಲಿನೊ ಅವರಂತೆ ಕಾಣುವ ಗೊಂಬೆಯನ್ನು ತಯಾರಿಸಲಾಗಿದ್ದು ಕರಾವಳಿ ಬೆಡಗಿಯ ಅಭಿಮಾನಿಗಳು ಗೊಂಬೆ ಕಂಡು ಹುಬ್ಬೇರಿಸಿದ್ದಾರೆ.
ಇತ್ತೀಚೆಗೆ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಆಡ್ಲೈನ್ ಕ್ಯಾಸ್ಟೆಲಿನೊ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಕರ್ನಾಟಕ ಮೂಲದ 22 ವರ್ಷದ ಆಡ್ಲೈನ್ ಕ್ಯಾಸ್ಟೆಲಿನೊ ಅಮೆರಿಕದ ಮಿಯಾಮಿಯ ಫ್ಲೋರಿಡಾದಲ್ಲಿ ನಡೆದ 69 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 3 ನೇ ರನ್ನರ್ ಅಪ್ ಆದರು. ಅವರು ತನ್ನ ಸೌಂದರ್ಯದಿಂದ ಮಾತ್ರವಲ್ಲದೆ ತನ್ನ ಬುದ್ಧಿಶಕ್ತಿಯಿಂದಲೂ ಜನರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ವೇಷಭೂಷಣದಲ್ಲಿ ಮಿಂಚಿದ ಅವರು ಸಾಂಪ್ರದಾಯಿಕ ಗುಲಾಬಿ ಬಣ್ಣದ ಸೀರೆಯಲ್ಲಿ ನೋಡುಗರ ಕಣ್ಮನ ಸೆಳೆದಿದ್ದರು. ಪ್ರೇಕ್ಷಕರು ಅವರ ಸೀರೆ ನೋಟವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಶ್ರೀಲಂಕಾ ಮೂಲದ ಕಲಾವಿದ ಓ ನಿಘೇಶನ್ ಗೌರವ ಮತ್ತು ಮೆಚ್ಚುಗೆಯ ಸಂಕೇತವಾಗಿ ಸೀರೆಯುಟ್ಟ ಆಡ್ಲೈನ್ ಕ್ಯಾಸ್ಟೆಲಿನೊ ಅವರಂತೆ ಕಾಣುವ ಗೊಂಬೆಯನ್ನು ಮಾಡಿದ್ದಾರೆ.
ಶ್ರೀಲಂಕಾದಿಂದ ಶುಭಾಶಯಗಳನ್ನು ಕಳುಹಿಸುತ್ತಾ, ನಿಘೇಶನ್ ಆಡ್ಲೈನ್ ಕ್ಯಾಸ್ಟೆಲಿನೊಗೆ ಅಭಿನಂದಿಸಿದರು. ” ಶ್ರೀಲಂಕಾದಿಂದ ಪ್ರೀತಿಯ ಮಿಸ್ ಯೂನಿವರ್ಸ್ 2020ರ 3 ನೇ ರನ್ನರ್ ಅಪ್ ಆಡ್ಲೈನ್ ಕ್ಯಾಸ್ಟೆಲಿನೊನಿಂದ ಪ್ರೇರಿತವಾದ ಗೊಂಬೆಗೆ ಅಭಿನಂದನೆಗಳು!” ಎಂದು ಬರೆದಿದ್ದಾರೆ.
ಈ ಗೊಂಬೆ ಫೋಟೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳಿಂದ ಪ್ರಶಂಸೆವ್ಯಕ್ತವಾಗಿದೆ. ಕೆಲವರು “ಕಠಿಣ ಪರಿಶ್ರಮ ಎಂದಿಗೂ ವಿಫಲವಾಗುವುದಿಲ್ಲ” ಎಂದುಕಾಮೆಂಟ್ ಮಾಡಿದ್ದಾರೆ.