ಕೋವಿಡ್ ರೋಗಿಗಳಿಗೆ ತಾಯಿ ತಯಾರಿಸಿದ ಊಟದ ಬಾಕ್ಸ್ ಮೇಲೆ ಪುಟ್ಟ ಬಾಲಕನ ಪ್ರೀತಿಯ ಸಂದೇಶ!

ಕೋವಿಡ್ ರೋಗಿಗಳಿಗಾಗಿ ತಾಯಿ ತಯಾರಿಸಿದ ಊಟದ ಬಾಕ್ಸ್ ಮೇಲೆ ಪುಟ್ಟ ಬಾಲಕನೋರ್ವ ಪ್ರೀತಿಯ ಸಂದೇಶಗಳನ್ನು ಬರೆಯುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಮನ ಗೆದ್ದಿದೆ.

ಕೋವಿಡ್ -19 ರೋಗಿಗಳಿಗಾಗಿ ತನ್ನ ತಾಯಿ ಸಿದ್ಧಪಡಿಸಿದ ಊಟ ಬಾಕ್ಸಗಳ ಮೇಲೆ ಪುಟ್ಟ ಬಾಲಕ ವಿಶೇಷ ಸಂದೇಶ ಬರೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಊಟದ ಬಾಕ್ಸಗಳ ಮೇಲೆ ಬಾಲಕ “ಖುಷ್ ರಹೀ” ಅಥವಾ “ಸಂತೋಷವಾಗಿರಿ” ಎಂದು ಬರೆದು ಕಳುಹಿಸಿದ್ದಾರೆ. ಹುಡುಗನ ಫೋಟೋ ಪ್ರಸ್ತುತ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮ ಬಳಕೆದಾರರು ಹುಡುಗನ ಚಿಂತನಶೀಲತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತವು ಕೊರೋನವೈರಸ್ನ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಈ ಚಿತ್ರ ಅನೇಕರ ಮನಗೆದ್ದಿದೆ.

ಬಾಲಕನ ಫೋಟೋ ಮೊದಲು ಎರಡು ದಿನಗಳ ಹಿಂದೆ ಫೇಸ್‌ಬುಕ್, ರೆಡ್ಡಿಟ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಂಡಿತು. ಅಂದಿನಿಂದ, ಇದು ಸಾವಿರಾರು ಜನರನ್ನು ತಲುಪಿದೆ.

https://twitter.com/manishsarangal1/status/1394562905132060676?ref_src=twsrc%5Etfw%7Ctwcamp%5Etweetembed%7Ctwterm%5E1394562905132060676%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-boys-special-message-on-meal-boxes-made-by-mom-for-covid-patients-2444683

ಫೋಟೋದಲ್ಲಿ ಹಸಿರು ಶರ್ಟ್ ಧರಿಸಿದ ಶಾಲಾ ಹುಡುಗನನ್ನು ನೋಡಬಹುದು. ಊಟದ ಬಾಕ್ಸನ ರಟ್ಟಿನ ಮುಚ್ಚಳದ ಮೇಲೆ “ಖುಷ್ ರಹಿಯೆ” ಎಂದು ಬಾಲಕ ಹಿಂದಿಯಲ್ಲಿ ಬರೆಯುತ್ತಿದ್ದಾನೆ. ಇದೇ ರೀತಿ ಮೇಜಿನ ಮೇಲೆ ಅವನ ಪಕ್ಕದಲ್ಲಿರುವ ಹಲವಾರು ಊಟದ ಬಾಕ್ಸಗಳ ಮೇಲೆ ಬಾಲಕ ಬರೆದಿದ್ದಾನೆ.

ಈ ಫೋಟೋ ಟ್ವೀಟರ್ ನಲ್ಲಿ 12,000 ಕ್ಕೂ ಹೆಚ್ಚು ‘ಲೈಕ್’ಗಳನ್ನು ಮತ್ತು ನೂರಾರು ಕಾಮೆಂಟ್ಗಳನ್ನು ಸಂಗ್ರಹಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights