ತೈಲ, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ!

ತೈಲ, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಟ್ ಹಾಕಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಟೆಂಟ್ ಹಾಕಿ ಅಡುಗೆ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಕೈಬಿಡುವಂತೆ ಸೂಚಿಸಿದರೂ ಪ್ರಯೋಜನವಾಗಲಿಲ್ಲ.

ಘಟನಾ ಸ್ಥಳದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ಮಾಡುತ್ತಾರೆಂಬ ಕಾರಣಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪೋಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆದಿದೆ. ಪ್ರತಿಭಟನೆಯಲ್ಲಿ ರೈತ ಹಾಗೂ ಕಾರ್ಮಿಕರು ಭಾಗಿಯಾಗಿದ್ದಾರೆ. ಪೂಣೆ ಬೆಂಗಳೂರು ಹೈವೇಯಲ್ಲಿ ಟ್ಯಾಕ್ಸಿ, ರೈತ, ಕಾರ್ಮಿಕ ಸಂಘಟನಾಕಾರರು ಪ್ರತಿಭಟನೆಯಲ್ಲಿ ಆಭಗಿಯಾಗಿದ್ದಾರೆ. ಟೆಂಟ್ ಹಾಕಿ ಮಹಿಳೆಯರು ಅಡುಗೆ ಮಾಡುತ್ತಿದ್ದಾರೆ.

ತೈಲ ಗ್ಯಾಸ್ ಬೆಲೆ ಸಾಕಷ್ಟು ಹೊರೆ ಆಗುತ್ತಿದ್ದರಿಂದ ಈ ರೀತಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಹೊಲ ಗದ್ದೆಯಲ್ಲಿ ಕೆಲಸ ಮಾಡಲು ಟ್ರ್ಯಾಕ್ಟರ್ ಗೆ ಗಂಟೆಗೆ 300 ಕೊಡಬೇಕಿತ್ತು. ಆದ್ರೆ ಈಗ ಗಂಟೆಗೆ 1000 ಕೊಡಬೇಕು. ಆಟೋ ಚಾರ್ಜ್ ಕೂಡ ಅಧಿಕವಾಗಿದೆ. ಟ್ರಾನ್ಸೋರ್ಟ್ ಕೂಡ ಹೆಚ್ಚಾಗಿದೆ. ತರಕಾರಿ ರೇಟ್ ಮಾತ್ರ ಅಷ್ಟೇ ಇದೆ ಆದರೆ ಉಳಿದ ರೇಟ್ ಮಾತ್ರ ಅಧಿಕವಾಗುತ್ತಿದೆ ಎಂದು ರೈತರು ದೂರಿದ್ದಾರೆ. ಹೀಗಾಗಿ ತೈಲ, ಗ್ಯಾಸ್ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights