ಸಂಸತ್‌ ಚಳಿಗಾಲದ ಅಧಿವೇಶನ ರದ್ದು: ಸಚಿವ ಪ್ರಹ್ಲಾದ್ ಜೋಶಿ

ಕೊರೊನಾ ವೈರಸ್‌ ಕಾರಣದಿಂದಾಗಿ ಈ ವರ್ಷ ಸಂಸತ್‌ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಗಿದೆ. 2012ರ ಜನವರಿಯಲ್ಲಿ ಬಜೆಟ್‌ ಅಧಿವೇಶನವನ್ನು ಮಾತ್ರ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕಳೆದ ಮಾನ್ಸೂನ್‌ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದ ಮೂರು ಕೃಷಿ ಮಸೂದೆಗಳ ವಿರುದ್ದ ರೈತರ ಪ್ರತಿಭಟನೆ ನಡೆಯುತ್ತಿಸುತ್ತಿದ್ದಾರೆ. ಹೀಗಾಗಿ ಕಾಯ್ದೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಡಿಮೆ ಅವಧಿಯ ಚಳಿಗಾಲದ ಅಧಿವೇಶನವನ್ನು ಕರೆಯಬೇಕು ಎಂದು  ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ  ಅವರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಉತ್ತರಿಸಿರುವ ಜೋಶಿ, ಅಧಿವೇಶನ ನಡೆಯುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ.

“ಕೊರೊನಾ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಚಳಿಗಾಲದ ತಿಂಗಳುಗಳು ಬಹಳ ನಿರ್ಣಾಯಕವಾಗಿವೆ. ಏಕೆಂದರೆ ಈ ಅವಧಿಯಲ್ಲಿ, ವಿಶೇಷವಾಗಿ ದೆಹಲಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಅಧಿವೇಶನ ನಡೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಮಂತ್ರಿ ಮಂಡಲದ ಸಚಿವರು ವಿವಿಧ ರಾಜಕೀಯ ಮುಂಡರನ್ನು ಸಂಪರ್ಕಿಸಿದ್ದಾರೆ. ಎಲ್ಲರೂ ಕೊರೊನಾ ಬಗೆಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ಸಂಸತ್ತಿನ ಮುಂದಿನ ಅಧಿವೇಶನವನ್ನು ಶೀಘ್ರವಾಗಿ ನಡೆಸಲು ಸರ್ಕಾರ ಸಿದ್ಧವಾಗಿದೆ; ಕೋವಿಡ್ -19 ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು 2021 ರ ಜನವರಿಯಲ್ಲಿ ಬಜೆಟ್ ಅಧಿವೇಶನ ನಡೆಸುವುದು ಸೂಕ್ತ” ಎಂದು ಜೋಶಿ ಪತ್ರದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಗೋವಾ ಚುನಾವಣೆ: ಭರ್ಜರಿ ಗೆಲವು ಸಾಧಿಸಿದ ಬಿಜೆಪಿ; ಖಾತೆ ತೆರೆದ ಎಎಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಸಂಸತ್‌ ಚಳಿಗಾಲದ ಅಧಿವೇಶನ ರದ್ದು: ಸಚಿವ ಪ್ರಹ್ಲಾದ್ ಜೋಶಿ

  • December 21, 2020 at 10:38 am
    Permalink

    sarkaradfa duddu uliyuitte aqnta tilididdare tappu; sankatagalinda paraguva yatnavirabekappa!!

    Reply

Leave a Reply

Your email address will not be published.

Verified by MonsterInsights