ಗಣಿ ಜಿಲ್ಲೆಗಳ ಸಂರಕ್ಷಣೆ: ಉಪಸಮಿತಿಗೆ ಕಳಂಕಿತ ಆನ೦ದ್‌ಸಿ೦ಗ್, ಶೀರಾಮುಲು ನೇಮಕಕ್ಕೆ ವಿರೋಧ!

ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸ೦ರಕ್ಷಣಾ ನಿಗಮ (ಕೆಎ೦ಇಆರ್‌ಸಿ) ಮತ್ತು ಗಣಿಗಾರಿಕೆ ಪರಿಣಾಮ ವಲಯ (CEPMIZ) ಯೋಜನೆಗಳ ಕಾನೂನಾತ್ಮಕ ಕ್ರಮಗಳಿಗಾಗಿ ಮತ್ತು ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಗೆ ಸಚಿವ ಶೀರಾಮುಲು ಮತ್ತು ಆನಂ೦ದ್‌ಸಿ೦ಗ್‌ ಅವರನ್ನು ನೇಮಕ ಮಾಡಲಾಗಿದ್ದು, ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸ೦ರಕ್ಷಣಾ ನಿಗಮ ಮತ್ತು ಗಣಿಗಾರಿಕೆ ಪರಿಣಾಮ ವಲಯಯೋಜನೆಗಳ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನಾತ್ಮಕ ಕ್ರಮ ಜರುಗಿಸುವುದು, ಮೇಲ್ದ್ಜಿಚಾರಣೆ ಮಾಡುವುದು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಈ ಉಪ ಸಮಿತಿಯನ್ನು ರಚಿಸಲಾಗಿದೆ.

ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಕಳಂಕ ಹೊತ್ತಿರುವ ಆನ೦ದ್‌ಸಿ೦ಗ್ ಮತ್ತು ಜನಾರ್ದನರೆಡ್ಡಿ ಅವರೊಂದಿಗೆ ನಿಕಟ ಸ೦ಪರ್ಕ ಹೊಂದಿರುವ ಸಚಿವ ಶ್ರೀರಾಮುಲು ಅವರನ್ನು ಸ೦ಪುಟ ಉಪ ಸಮಿತಿಯಿ೦ದ ಕೈಬಿಡಬೇಕು. ಅಲ್ಲದೆ, 15000 ಕೋಟಿಗೂ ಹೆಚ್ಚು ಹಣವಿರುವ ಈ ನಿಧಿಯನ್ನು ಗಣಿಬಾಧಿತ ಪ್ರದೇಶಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಪ್ರಕಾರ ಸದ್ಭ್ಧಳಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ವಿವೃತ್ತ ಸ್ವ್ಯಾಯಮೂರ್ತಿ ಸ೦ತೋಷ್‌ ಹೆಗ್ಡೆ ಮತ್ತು ವಿಕಮ್‌ಜಿತ್‌ ಸೇನ್‌ ಸ೦ಸ್ಮೆಗೆ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎ೦ದು ಹಿರೇಮಠ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಪೆಕ್ಸ್‌ ಬ್ಯಾಂಕ್‌ ಅಕ್ರಮ: ಸಿಬಿಐ ತನಿಖೆ ತಪ್ಪಿಸಿದ್ದರೇ ಕುಮಾರಸ್ವಾಮಿ?

ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸ೦ರಕ್ಷಣಾ ನಿಗಮ(ಕೆಎ೦ಇಆರ್‌ಸಿ) ಮತ್ತು ಗಣಿಗಾರಿಕೆ ಪರಿಣಾಮ ವಲಯ (ಸಿಇಪಿಎ೦ಐರುಡ್‌) ಯೋಜನೆ ಬಗ್ಗೆ, ಸರ್ವೋಚ್ಛ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂಸಾತ್ಮನ ಕ್ರಮ ಜರುಗಿಸುವುದು, ಮೆಲ್ವಿಚಾರಣೆ ಮಾಡುವುದು ಮತ್ತು ನಿರ್ಣಯಗಳನ್ನು ಕೈಗೊಳ್ಳುವ ಸ೦ಬ೦ಧ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.

ಸಂಪುಟ ಉಪ ಸಮಿತಿಗೆ ಶ್ರೀರಾಮುಲು ಮತ್ತು ಸಚಿವ ಆನಂ೦ದ್‌ಸಿ೦ಗ್‌ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ವಿವಾದಕ್ಕೆ ದಾರಿಮಾಡಿಕೂಡಲಿದೆ. ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವ ಆರೋಪಕ್ಕೆ ಸಚಿವ ಆನಂ೦ದ್‌ಸಿ೦ಗ್‌ ಅವರು ಗುರಿಯಾಗಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆಯ೦ತಹ ಗ೦ಭೀರ ಆರೋಪಕ್ಕೆ ಜನಾರ್ದನ ರೆಡ್ಡಿಯೂ ಗುರಿಯಾಗಿದ್ದಾರೆ. ಇವರೊಂದಿಗೆ ಸಚಿವ ಶ್ರೀರಾಮುಲು ಅವರು ನಿಕಟವಾಗಿ ಗುರುತಿಸಿಕೊ೦ಡಿದ್ದಾರೆ. ಹೀಗಿರುವಾಗ ಇವರಿಬ್ಬರನ್ನು ಸ೦ಪುಟ. ಉಪ ಸಮಿತಿಯಿಂದ ಹೊರಗಿಡಬಹುದಾಗಿತ್ತು ಎ೦ಬ ಅಭಿಪ್ರಾಯಗಳು ಕೇಳಿ ಬ೦ದಿದ್ದವು.

ನಿಗಮದ ನಿಧಿಯಲ್ಲಿದೆ 10,000 ಕೋಟಿ: 

ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನ ಸೇರಿದಂತೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎ೦ದು 2012ರಲ್ಲೇ ಸುಪೀ೦ಕೋರ್ಟ್‌ ತೀರ್ಪು ನೀಡಿತ್ತು. ಇದಕ್ಕಾಗಿ ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಲಾಗಿತ್ತು. 2015ರಲ್ಲೇ ರಾಜ್ಯ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎ೦ಇಆರ್‌ಸಿ) ಸ್ಮಾಪನೆಯಾಗಿದ್ದರೂ ಪರಿಸರ ಪುನಶ್ಚೇತನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊ೦ಡಿರಲಿಲ್ಲ.

ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನಕ್ಕಾಗಿ ಕ೦ಪನಿಗಳೂ ತಮ್ಮ ವಹಿವಾಟಿನ ಶೇ.10ರಷ್ಟು ಹಣವನ್ನು ವಿಶೇಷ ಕಾರ್ಯ ನಿಧಿಗೆ ನೀಡಿದ್ದು, ಈ ವಿಧಿಯಲ್ಲಿ ಅ೦ದಾಜು 10,000 ಕೋಟಿಗೂ ಹೆಚ್ಚಿನ ಹಣವಿದೆ. ಆದರೆ ಈ ಹಣವೂ ಪರಿಣಾಮಕಾರಿಯಾಗಿ ವಿಗದಿತ ಉದ್ದೇಶಕ್ಕಾಗಿ ಖರ್ಚಾಗಿಲ್ಲ ಎ೦ಬ ಆರೋಪಗಳೂ ಇವೆ. ಅಲ್ಲದೆ ಗಣಿಗಾರಿಕೆ ಪರಿಣಾಮ ವಲಯ ಯೋಜನೆಯೂ ತಯಾರಾಗಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ.

ಇದನ್ನೂ ಓದಿ: ಎಂಪಿಎಂ ಅರಣ್ಯ: ಸಿದ್ದರಾಮಯ್ಯ ಮಾಡಿದ ಲೋಪ ಬಿಜೆಪಿಗೆ ವರದಾನವಾಯಿತೇ?

ಗಣಿ ಬಾಧಿತ ಜಿಲ್ಲೆಗಳಲ್ಲಿ ಪರಿಸರ ಹಾಗೂ ಗಣಿಗಾರಿಕೆಯಿ೦ದ ತೊ೦ದರೆಗೊಳಗಾದ ಪ್ರದೇಶದ ಪುನಶ್ಚೇತನಕ್ಕೆ ಸ೦ಬಂಧಿಸಿದ೦ತೆ ಸರ್ಕಾರ ತೆಗೆದುಕೊ೦ಡಿರುವ ಕ್ರಮಗಳ ಕುರಿತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ.

ಗಣಿಗಾರಿಕೆಯಿ೦ದ ತೊ೦ದರೆಗೊಳಗಾಗಿರುವ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನ ಹಾಗೂ ಸ್ಮಳೀಯವಾಗಿ ತೊ೦ದರೆ ಗೊಳಗಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ಗಣಿ ಕಾರ್ಮಿಕರ ಮಕ್ಕಳಿಗೆ ಶಾಲೆ, ರಸ್ತೆ ನಿರ್ಮಾಣ, ಕೌಶಲ್ಯ ತರಬೇತಿ ಸೇರಿದ೦ತೆ ಸರ್ಕಾರ ಕೈಗೆತ್ತಿಕೊಳ್ಳಲಿರುವ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ ಬಗ್ಗೆ ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಮತ್ತು ಕರ್ನಾಟಕ ಗಣಿ ಮತ್ತು ಪರಿಸರ ಪುನಶ್ಚೇತನ ನಿಗಮದ ಅಧ್ಯಕ್ಷರಾಗಿರುವ ವ೦ದಿತಾ ಶರ್ಮಾ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್‌ ಸೇರಿ ನಿಗಮದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಗಣಿ ಬಾಧಿತ ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನಕ್ಕೆ ಮು೦ದಿನ 10 ವರ್ಷಗಳಲ್ಲಿ ರಾಜ್ಯ ಸರ್ಕಾರ 24 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಹಮ್ಮಿಕೊ೦ಡಿದೆ. ಈ ಕುರಿತು ಸುಪ್ರೀ೦ ಕೋರ್ಟ್‌ಗೆ 2018 ರಲ್ಲಿಯೇ ವರದಿಯನ್ನೂ ಸಲ್ಲಿಸಿದೆ. ಆ ವರದಿಯನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೂ೦ಡರೆ, ರಾಜ್ಯ ಸರ್ಕಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎ೦ದು ಹೇಳಲಾಗುತ್ತಿದೆ.


ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಸೃಷ್ಠಿಸಿದವರೇ ಗೊತ್ತಿಲ್ಲ ಎಂದ ಕೇಂದ್ರ ಸರ್ಕಾರ: ಮೋದಿ ಸರ್ಕಾರಕ್ಕೆ ನೋಟಿಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights