ಕೆಜಿಎಫ್-1, ಟಗರು, ಶಿವಾರ್ಜುನ, ಲವ್ಮೊಕ್ಟೈಲ್ ಸಿನಿಮಾ ಮತ್ತೆ ರಿಲೀಸ್!
ಕೊರೊನಾ ಅನ್ಲಾಕ್ ಪ್ರಕ್ರಿಯೆಯಲ್ಲಿ ಥಿಯೇಟರ್ಗಳು, ಮಲ್ಟಿಫ್ಲೆಕ್ಸ್ಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಕೊರೊನಾ ಸೋಂಕು ಇನ್ನೂ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಈಗಷ್ಟೇ ತೆರೆದಿರುವ ಚಿತ್ರಮಂದಿರಗಳಿಗೆ ಸಿನಿ ಪ್ರೇಕ್ಷಕರು, ಅಭಿಮಾನಗಳು ಎಷ್ಟರ ಸಂಖ್ಯೆಯಲ್ಲಿ ಬರಬಹುದು, ಸಿನಿಮಾಗಳು ಹೆಚ್ಚು ಗಳಿಕೆ ಕಾಣಲು ಸಾಧ್ಯವೇ ಎಂಬ ಗೊಂದಲ ಹೊಸ ಸಿನಿಮಾ ಮಾಡಿರುವ ಚಿತ್ರದಂಡಗಳಿಗೆ ಎದುರಾಗಿದೆ. ಹಾಗಾಗಿ ಹೊಸ ಸಿನಿಮಾಗಳನ್ನು ಈಗಲೇ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಹಾಗಾಗಿ, ಲಾಕ್ಡೌನ್ಗೂ ಮುಂಚೆಯೇ ತೆರೆಕಂಡಿದ್ದ ಹಲವಾರು ಸಿನಿಮಾಗಳನ್ನು ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸ್ಯಾಂಡಲ್ವುಡ್ ಸಿದ್ದತೆ ನಡೆಸಿದೆ. ಈಗಾಗಲೇ ಲಾಕ್ ಡೌನ್ ಗೂ ಮುನ್ನ ಪ್ರದರ್ಶನಗೊಳ್ಳುತ್ತಿದ್ದ ದಿಯಾ, ಲವ್ ಮಾಕ್ಟೇಲ್, ಶಿವಾರ್ಜುನ ಸಿನಿಮಾಗಳು ಸೇರಿದಂತೆ ಹಲವಾರು ಸಿನಿಮಾಗಳನ್ನು ರಿಲೀಸ್ ಮಾಡಲಾಗಿದೆ.
ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಚಿತ್ರ ಎನಿಸಿಕೊಂಡಿರುವ ಶಿವಾರ್ಜುನ ಸಿನಿಮಾ ರಿಲೀಸ್ ಅದ ಒಂದೇ ವಾರಕ್ಕೆ ಲಾಕ್ಡೌನ್ ಮಾಡಲಾಗಿದ್ದರಿಂದಾಗಿ ಸಿನಿಮಾ ಪ್ರದರ್ಶನ ಮೊಟಕುಗೊಂಡಿತ್ತು. ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣದಿಂದಾಗಿ ಹಾಗೂ ಜಿರು ಅಭಿಮಾನಿಗಳು ಮತ್ತೆ ತಮ್ಮ ಸ್ಟಾರ್ ನಟನನ್ನು ತೆರೆಯ ಮೇಲೆ ನೋಡುವ ಅವಕಾಶ ನೀಡಲು ಶಿವಾರ್ಜುನ ಸಿನಿಮಾ ಮತ್ತೆ ತೆರೆಕಾಣುತ್ತಿದೆ. ಇನ್ನು ಕನ್ನಡ ಲವ್ ಸಿನಿಮಾಗಳಲ್ಲಿ ಹೊಸ ರೀತಿಯ ಪ್ರೀತಿ ಹುರುಪು ನೀಡಿ, ಲವ್ ಬರ್ಡ್ಸ್ಗಳಿಗೆ ಮುದ ನೀಡಿದ್ದ ಲವ್ ಮೊಕ್ಟೈಲ್ ಸಿನಿಮಾ ಕೂಡ ರಿಲೀಸ್ ಆಗಿದೆ.
ಇದನ್ನೂ ಓದಿ: ಚಿರು ಕಟೌಂಟ್ ಪಕ್ಕದಲ್ಲಿಟ್ಟು, ಸೀಮಂತ ಆಚರಿಸಿಕೊಂಡ ಮೇಘನಾ ರಾಜ್!
ಈ ಸಿನಿಮಾಗಳಷ್ಟೇ ಅಲ್ಲದೆ, ಹೆಚ್ಚು ಜನರನ್ನು ಥಿಯೇಟರ್ಗಳತ್ತ ಸೆಳೆಯಲು ಈಗಾಗಲೇ ಸ್ಯಾಂಡಲ್ವುಡ್ ರಂಗದಲ್ಲಿ ಹೆಚ್ಚು ಗಳಿಕೆ ಕಂಡಿದ್ದ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಇವುಗಳಲ್ಲಿ ಮುಂದೇನಾಗಬಹುದು ಎಂದು ಹೆಚ್ಚು ಕುತೂಹಲ ಹುಟ್ಟುಹಾಕಿರುವ ನಟ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ನಿರೀಕ್ಷೆಯಲ್ಲಿರುವ ಸಿನಿ ರಸಿಕರಿಗೆ ಕೆಜಿಎಫ್-1 ಸಿನಿಮಾವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಕೆಜಿಎಫ್-1 ಸಿನಿಮಾ 2018 ಡಿಸೆಂಬರ್ 21ರಂದು ದೇಶ ಮತ್ತು ವಿದೇಶಗಳಲ್ಲಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಂಡಿತ್ತು. ಅಲ್ಲದೆ, 2019ನೇ ಸಾಲಿನ ಅಮೆಜಾನ್ ಪ್ರೈಮ್ ನಲ್ಲೂ ಅತಿ ಹೆಚ್ಚು ಜನರು ವೀಕ್ಷಿಸಿದ ಭಾರತ ಸಿನಿಮಾ ಎಂಬ ಕೀರ್ತಿಗೂ ಪಾತ್ರವಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ 66ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು.
ಈ ಸಿನಿಮಾದ ಜೊತೆಗೆ ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಕೂಡ ರೀ ರಿಲೀಸ್ ಆಗಿದೆ. 2018ರಲ್ಲಿ ತೆರೆ ಕಂಡಿದ್ದ ಈ ಸಿನಿಮಾ ದಾಖಲೆ ಬರೆದಿತ್ತು. ಅಲ್ಲದೆ, ಅಭಿಮಾನಿಗಳು ಗುಲ್ಲೆದ್ದು ಕುಣಿದಿದ್ದರು.
ಇದನ್ನೂ ಓದಿ: ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ ನಟ ಧನ್ವೀರ್ : ಜನಸಾಮಾನ್ಯರ ಆಕ್ರೋಶ…!