NRC : ಕಣ್ಮರೆಯಾದ ಅಸ್ಸಾಂ ಡೇಟಾ! : ತಾಂತ್ರಿಕ ತೊಂದರೆಯೆಂದ ಗೃಹ ಸಚಿವಾಲಯ..

ಕಳೆದ ಆಗಸ್ಟ್‌ನಲ್ಲಿ ಪ್ರಕಟವಾದ ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿಯ (ಎನ್‌ಆರ್‌ಸಿ) ಅಂತಿಮ ದತ್ತಾಂಶ ಪಟ್ಟಿಯು ವೆಬ್‌ಸೈಟ್‌ನಿಂದ ಕಣ್ಮರೆಯಾಗಿದ್ದು ಕಳವಳಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಡೇಟಾವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಈಗ ಅದು ಕ್ಲೌಡ್‌ನಿಂದ ನಾಪತ್ತೆಯಾಗಿದ್ದೆ. ಇದರ ಕುರಿತು ಕೇಂದ್ರ ಗೃಹ ಸಚಿವಾಲಯವು ಎನ್ಆರ್‌ಸಿ ಡೇಟಾ ಸುರಕ್ಷಿತವಾಗಿದೆ ಮತ್ತು “ಕ್ಲೌಡ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಾದ ಕಾರಣ ಅದು ಕಾಣುತ್ತಿಲ್ಲ. ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತಿದೆ ಎಂದು ತಿಳಿಸಿದೆ.

ಆದರೆ ಐಟಿ ಸಂಸ್ಥೆ ವಿಪ್ರೊ ಜೊತೆಗಿನ ಒಪ್ಪಂದವನ್ನು ನವೀಕರಿಸದೇ ಇರುವುದು ದತ್ತಾಂಶ ಕಣ್ಮರೆಗೆ ಕಾರಣ ಎಂದು ಎನ್‌ಆರ್‌ಸಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಅಂತಿಮ ಪಟ್ಟಿಯನ್ನು ಆಗಸ್ಟ್ 31, 2019 ರಂದು ಪ್ರಕಟಿಸಿದೆ. ಅಸ್ಸಾಂ ಎನ್‌ಆರ್‌ಸಿಯಲ್ಲಿ ಭಾರತೀಯ ನಾಗರಿಕರನ್ನು ಹೊರಗಿಡುವ ಮತ್ತು ಸೇರ್ಪಡೆಗೊಳಿಸುವ ಸಂಪೂರ್ಣ ವಿವರವನ್ನು ಅದರ ಅಧಿಕೃತ ವೆಬ್‌ಸೈಟ್ ‘www.nrcassam.nic.in’ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

“ಬೃಹತ್ ಪ್ರಮಾಣದ ದತ್ತಾಂಶಕ್ಕಾಗಿ ಕ್ಲೌಡ್‌ ಸೇವೆಯನ್ನು ವಿಪ್ರೋ ಒದಗಿಸಿದ್ದರು ಮತ್ತು ಅವರ ಒಪ್ಪಂದವು ಕಳೆದ ವರ್ಷ ಅಕ್ಟೋಬರ್ 19 ರವರೆಗೆ ಇತ್ತು. ಆದಾಗ್ಯೂ, ಇದನ್ನು ನವೀಕರಿಸಲಿಲ್ಲ. ಆದ್ದರಿಂದ, ಡಿಸೆಂಬರ್ 15 ರಿಂದ ಡೇಟಾ ಆಫ್‌ಲೈನ್‌‌ಗೆ ಹೋಗಿತು. ಇದನ್ನು ವಿಪ್ರೋ ಅಮಾನತುಗೊಳಿಸಿದ ನಂತರ ಡಿಸೆಂಬರ್ 24 ರಂದು ನಾನು ಅಧಿಕಾರ ವಹಿಸಿಕೊಂಡಿದ್ದೇನೆ “ಎಂದು ಎನ್ಆರ್ಸಿ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಜನವರಿ 30 ರಂದು ನಡೆದ ಸಭೆಯಲ್ಲಿ ಅಗತ್ಯ ಸಮನ್ವಯತೆ ಮಾಡಲು ರಾಜ್ಯ ಸಮನ್ವಯ ಸಮಿತಿ ನಿರ್ಧರಿಸಿದೆ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ವಿಪ್ರೊಗೆ ಪತ್ರ ಬರೆದಿದೆ ಎಂದು ಅವರು ಹೇಳಿದರು. “ಒಮ್ಮೆ ವಿಪ್ರೊ ಡೇಟಾವನ್ನು ಲೈವ್ ಮಾಡಿದ ನಂತರ, ಅದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಜನರು ಅದನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಶರ್ಮಾ ಮಂಗಳವಾರ ಹೇಳಿದರು.

ಈ ಬೆಳವಣಿಗೆಯನ್ನು ಕಾಂಗ್ರೆಸ್‌ ತೀವ್ರವಾಗಿ ಟೀಕಿಸಿದ್ದು, ನಿಗೂಢ ಬೆಳವಣಿಗೆ ಎಂದು ಕರೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights