ಶಿವಮೊಗ್ಗ ಕಾರ್ಗಲ್ ಜೋಗ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ : ಕಾಂಗ್ರೇಸ್ ಗೆ ಹೀನಾಯ ಸೋಲು
ಶಿವಮೊಗ್ಗದ ಕಾರ್ಗಲ್ ಜೋಗ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.
ಕಳೆದ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಕಾರ್ಗಲ್ ಜೋಗ ಪಟ್ಟಣ ಪಂಚಾಯತಿ ಬಿಜೆಪಿ ತೆಕ್ಕೆಗೆ ಸೇರಿದೆ. ಒಟ್ಟು 11 ವಾರ್ಡ್ ಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ – 9, ಕಾಂಗ್ರೆಸ್ -1, ಪಕ್ಷೇತರ – 1 ಸ್ಥಾನ ಪಡೆದುಕೊಂಡಿದ್ದು, ಕಾಂಗ್ರೆಸ್ ಗೆ ಹೀನಾಯ ಸೋಲುಂಟಾಗಿದೆ.
ಕೇವಲ 1 ಸ್ಥಾನವಷ್ಟೆ ಗೆದ್ದ ಕಾಂಗ್ರೆಸ್ ಭಾರೀ ಮುಖಭಂಗವಾಗಿದೆ. ಬಿಜೆಪಿ ಪಾಳಯದಲ್ಲಿ ಹರ್ಷ ಮೂಡಿದೆ.
ಒಟ್ಟು 11 ವಾರ್ಡ್ ಗಳ ಚುನಾವಣೆ ಫಲಿತಾಂಶದ ವಿವರ ಇಂತಿದೆ :-
1ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ವಾಟೇಮಕ್ಕಿ ನಾಗರಾಜ ಜಯ.
2ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಮಂಜುನಾಥ್ ಗೆ ಜಯ.
3ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಲಲಿತಾ ಮಂಜುನಾಥ್. ಎಂಬುವವರಿಗೆ ಜಯ.
4 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಗೆ ಜಯ.
5 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ವಾಸಂತಿ ಜಯ.
6 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಗೆ ಜಯ.
7 ನೇ ವಾರ್ಡ್ ನಲ್ಲಿ ಬಿಜೆಪಿಯ ಅಭ್ಯರ್ಥಿ ಸುಬ್ರಹ್ಮಣ್ಯ ಗೆ ಜಯ.
8 ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಹರೀಶ್ ಗೌಡಗೆ ಜಯ
9 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ರಾಜು ಗೆ ಜಯ.
10 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮಿ ಗೆ ಜಯ.
11 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾತ ಗೆಲುವು.