ಬಿಬಿಎಂಪಿಯ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆ…

ಜೋಗುಪಾಳ್ಯ ವಾರ್ಡ್ ನ ಬಿಬಿಎಂಪಿ ಕಾರ್ಪೊರೇಟರ್ ಗೌತಮ್ ಕುಮಾರ್ 129 ಮತಗಳನ್ನು ಪಡೆಯುವ ಮೂಲಕ ಸರಳ ಬಹುಮತದಿಂದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇಂದು ಬಿಬಿಎಂಪಿ ಕೌನ್ಸಿಲ್ ಕಟ್ಟಡದಲ್ಲಿ ಮೇಯರ್ ಚುನಾವಣೆ ನಡೆಸಲಾಗುತ್ತಿದೆ.ಕೈ ಎತ್ತುವ ಮೂಲಕ  ಸದಸ್ಯರಿಂದ ಮತ ಚಲಾವಣೆ ಮಾಡಲಾಯಿತು. ಒಟ್ಟು 257 ಮತಗಳಲ್ಲಿ 129 ಮತಗಳಿಸಿದ ಗೌತಮ್ ಕುಮಾರ್ ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ. ಇದರಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದವರ ಸಂಖ್ಯೆ ಅಧಿಕವಾಗಿದ್ದು, ಇದರಲ್ಲೂ ಇಬ್ಬರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆ ಹಂತದಲ್ಲಿ  ಪದ್ಮನಾಭ ರೆಡ್ಡಿ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡರು. ಇನ್ನೂ ಬಿಜೆಪಿಯಿಂದ ಗೌತಮ ಕುಮಾರ್ ಅವರಿಗೆ ಹೆಚ್ಚು ಮತಗಳು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಹರ್ಷಗುಪ್ತ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿ ಘೋಷಿಸಿದ್ದಾರೆ.

ಎರಡು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾದ, ಕಾರ್ಪೋರೇಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯಕ್ತಿ, ಅಕ್ಕಪಕ್ಕ ಕ್ಷೇತ್ರದಲ್ಲಿ ಪ್ರಭಾವ ಬೀರುವಂತ ವ್ಯಕ್ತಿ ಜೊತೆಗೆ ಪಕ್ಷ ನಿಷ್ಠವ್ಯಕ್ತಿ ಎನ್ನುವ ಆಧಾರದ ಮೇಲೆ ಗೌತಮ್ ಕುಮಾರ್ ಜೈನ್ ಅವರಿಗೆ ಬಿಜೆಪಿ ಮೇಯರ್ ಸ್ಥಾನವನ್ನು ನೀಡಿದೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights