ಉಗ್ರರ 7 ಕ್ಯಾಂಪ್ ಧ್ವಂಸ : 7 ಕಮಾಂಡೋಸ್ ಸೇರಿದಂತೆ, 50 ಉಗ್ರರನ್ನು ಹೊಡೆದುರುಳಿಸಿದೆ ಭಾರತೀಯ ಸೇನೆ
ಪಾಕ್ ಸೇನೆ ಬ್ರಿಗೇಡ್ ನ ಮುಖ್ಯ ಕಚೇರಿ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ನೀಲಂ ಕಣಿವೆ ಮೇಲೆ ಪಾಕಿಸ್ತಾನ್ ದಾಳಿ ನಡೆಸಿದ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದೆ.
ಪಾಕಿಸ್ತಾನದ 7 ಕಮಾಂಡೋಗಳನ್ನು ಹೊಡೆದುರುಳಿಸಿದ ಸೇನೆ, ಪಾಕ್ ಸೇನೆಯ ಶಸ್ತ್ರಾಗಾರದ ಮೇಲೂ ಅಟ್ಯಾಕ್ ಮಾಡಿದೆ. ಅಚ್ಚರಿ ದಾಳಿ ಮೂಲಕ ಪಾಕ್ ಗೆ ಮತ್ತೊಂದು ಎಚ್ಚರಿಕೆ ನೀಡಿದೆ. ಉಗ್ರರ 7 ಕ್ಯಾಂಪ್ ಧ್ವಂಸ ಮಾಡಿದ ಭಾರತೀಯ ಸೇನೆ 50 ಉಗ್ರರನ್ನು ಹೊಡೆದುರುಳಿಸಿದೆ.
ಬೋಫೋರ್ಸ್ ಪಿರಂಗಿಗಳ ಮೂಲಕ ಭಾರತೀಯ ಸೇನೆ ನಡೆಸಿರುವ ಕಾರ್ಯಚರಣೆ ಇದು. ಭಾರತದ ದಾಳಿ ನಂತರ ತುರ್ತು ಸಭೆಯನ್ನು ಪಾಕಿಸ್ತಾನ್ ಕರೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.