ಆಸ್ಪತ್ರೆಗಳಲ್ಲಿ ಕೊರೊನಾ ಹರಡುವ ಭೀತಿ : ರೋಗಿಗಳಿಗೆ ಹೊರಗಡೆ ಊಟ ಬಂದ್!

ಕೋವಿಡ್-19 ದಿನ ಕಳೆದಂತೆ ಹೆಚ್ಚಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಆತಂಕ ಅಧಿಕವಾಗಿದೆ. ಇದರಿಂದ ಇನ್ಮುಂದೆ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಹೊರಗಿನ ಊಟ ಕೊಡುವುದನ್ನ ನಿಷೇಧಿಸಲಾಗಿದೆ.

ಹೌದು… ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದು, ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಕಾಯ್ದೆ ಅನ್ವಯ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅದೆಷ್ಟೋ ರೋಗಿಗಳು ಹೊರಗಡೆ ಊಟ ಸೇವಿಸುವುದು ಸಾಮಾನ್ಯ. ಹೀಗಾಗಿ ಇದಕ್ಕೆ ಸದ್ಯ ಕಡಿವಾಣ ಬಿದ್ದಿದೆ. ಆಸ್ಪತ್ರೆಗಳ್ಲಿ ಕೊಡುವ ಊಟ ವೈದ್ಯರೇ ಸೂಚಿಸುವಂತದ್ದು, ಜೊತೆಗೆ ಇದರ ತಯಾರಿಕೆ ರೋಗಿಗಳಿಗೆ ಪೂರಕವಾಗಿರುತ್ತದೆ. ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಶಿಶು ಸುರಕ್ಷಾ ಯೋಜನೆಯಡಿ ಆಹಾರ ಒದಗಿಸಲಾಗುತ್ತಿದೆ.

ಜೊತೆಗೆ ಹೊರಗಿನ ಊಟ ಸೇವಿಸುವುದು ಸದ್ಯದ ಪರಿಸ್ಥಿತಿಗೆ ಸೂಕ್ತವಲ್ಲ. ಕೊರೊನಾ ಸೋಂಕಿನ ಭೀತಿ ಎಲ್ಲೆಡೆ ಹೆಚ್ಚಾಗಿದ್ದು ಸೋಂಕು ಹರಡುವ ಸಾಧ್ಯತೆ ಆಸ್ಪತ್ರೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಈ ನಿರ್ಧಾರ ಮಾಡಿದೆ. ಇದಕ್ಕೆ ಸಾರ್ವಜನಿಕರು ಹಾಗೂ ರೋಗಿಗಳು ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights