ನ.30ಕ್ಕೆ ಜೀ ಕನ್ನಡ “ಕನ್ನಡದ ಹಬ್ಬ” : ಮನೋರಂಜಿಸಲು ಸಜ್ಜಾದ ಕಿರುತೆರೆ ತಾರೆಗಳು

ಧಾರವಾಹಿ ಮತ್ತು ರಿಯಾಲಿಟಿ ಶೋ ಗಳಲ್ಲಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀ ಕನ್ನಡ. ವಿಕ್ಷಕರ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತ,ಕನ್ನಡಿಗರ ಮನೆ ಮನಸುಗಳನ್ನು ಗೆದ್ದು, ನಂಬರ್ ಒನ್ ವಾಹಿನಿಯಾಗಿ ಹೊಸ ದಾಖಲೆಗಳನ್ನು ಮಾಡುತ್ತಾ ಬಂದಿದೆ.

ಸೋಮವಾರದಿಂದ – ಶುಕ್ರವಾರದವರೆಗೂ ನಿಮ್ಮ ನೆಚ್ಚಿನ ಧಾರವಾಹಿಗಳನ್ನ ನಿಮ್ಮದೇ ಜೀವನ ಎಂಬತೆ ನಿಮ್ಮ ಮನೆಯೊಳಗೆ ತರುವ ಜೀ ವಾಹಿನಿಯು, ವಾರಾಂತ್ಯಕ್ಕೆ ಹೊಸ ಪ್ರಯೋಗಗಳು, ಹೊಸ ಪ್ರಯತ್ನಗಳೊಂದಿಗೆ, ಹಿಂದೆಂದೂ ಕಂಡಿರದಂತಹ, ಹಿಂದೆಂದೂ ಕೇಳಿರದಂತಹ ಕಾರ್ಯಕ್ರಮಗಳಾದ ಸರಿಗಮಪ, ಡ್ರಾಮ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಹಾಗೂ ಜೀ ವಾಹಿನಿ ಕನ್ನಡಕ್ಕಾಗಿಯೇ ನೀಡಿದ ಕೊಡುಗೆ “ಕನ್ನಡದ ಕಣ್ಮಣಿಗಳು” ಎಂಬ ವಿಭಿನ್ನ ಪ್ರಯೋಗಗಳನ್ನು ಮಾಡಿ ವಾರ ಪೂರ್ತಿ ಮನರಂಜನೆಯಲ್ಲಿ ಮುಳುಗುವಂತೆ ಮಾಡಿ ಕೇವಲ ಕರ್ನಾಟಕವಲ್ಲದೆ, ದೇಶ, ವಿದೇಶದ ಕನ್ನಡಿಗರೆಲ್ಲರು ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ.

ಜೀ ಕನ್ನಡ ವಾಹಿನಿಯ ಹೆಸರಿನಲ್ಲಿಯೆ “ಕನ್ನಡ” ಇರುವುದರಿಂದ ನವೆಂಬರ್ ಮಾತ್ರವಲ್ಲದೆ, ವರ್ಷ ಪೂರ್ತಿ ಕನ್ನಡದ ತೇರನ್ನ ಎಳೆಯುತ್ತಿದೆ, ಅದರಲ್ಲೂ ನವೆಂಬರ್ ಬಂತೆಂದರೆ ವಾಹಿನಿಗೆ ಹಬ್ಬದ ಸಡಗರ, ಆ ಸಂಭ್ರಮವನ್ನ ಜೀ ಕನ್ನಡ ವಾಹಿನಿ “ಕನ್ನಡದ ಹಬ್ಬ” ವಾಗಿ ಆಚರಿಸಿದೆ, ಈ “ಕನ್ನಡದ ಹಬ್ಬದಲ್ಲಿ” ಧಾರವಾಹಿಯ ನಟ-ನಟಿಯರು,ಕಾಮಿಡಿ ಕಿಲಾಡಿ, ಸರಿಗಮಪ, ಡ್ರಾಮ ಜೂನಿಯರ್ಸ್ ಕಲಾವಿದರು ಭಾಗವಹಿಸಿ ಹಾಡು, ನೃತ್ಯ,ಆಟಗಳ ಮೂಲಕ ಮನೋರಂಜಿಸಲು ಇದೇ ಶನಿವಾರ ಮಧ್ಯಾಹ್ನ 3.30ಗಂಟೆಗೆ ನಿಮ್ಮ ಮನೆಗೆ ಬರುತ್ತಿದ್ದಾರೆ.

ಇನ್ನುಳಿದಂತೆ ನಿರೂಪಕಿ “ಸುಷ್ಮಾ”, ತಮ್ಮ ಮಾತಿನ ಚಟಾಕಿಯ ಮೂಲಕ ಭಾಗವಹಿಸಿದ್ದ ಕಲಾವಿದರು, ನೆರೆದಿದ್ದ ಪ್ರೇಕ್ಷಕರೆಲ್ಲರನ್ನೂ ರಂಜಿಸುವ ಮೂಲಕ ಕನ್ನಡದ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದರು. ಕನ್ನಡದ ಹಬ್ಬ”ಇದೇ ಶನಿವಾರ ಮಧ್ಯಾಹ್ನ 3.30ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.