“ನಾನೇನು ಬೇರೆ ಕೆಲಸವಿಲ್ಲದೇ ಇಲ್ಲಿ ಬಂದು ಕೂತಿದಿನಾ” ಅಧಿಕಾರಿಗಳ ವಿರುದ್ದ ಜಿಪಂ ಅಧ್ಯಕ್ಷ ಗರಂ

ಯಾದಗಿರಿ

16 ಅಗಸ್ಟ್ 2017.

“ನಾನೇನು ಮಾಡಲು ಬೇರೆ ಕೆಲಸವಿಲ್ಲದೇ ಇಲ್ಲಿ ಬಂದು ಕೂತಿದಿನಾ” ಅಧಿಕಾರಿಗಳ ವಿರುದ್ದ ಜಿಪಂ ಅಧ್ಯಕ್ಷ ಗರಂ.

“ ಅಂಕಿ ಸಂಖ್ಯೆ ಗೊತ್ತಿಲ್ಲದ ಅಪೂರ್ಣ ಮಾಹಿತಿ ಇರುವ ಅಧಿಕಾರಿಗಳು ಸಭೆಗೆ ಬಂದರೆ, ನಾನೇನು ಮಾಡಲು ಬೇರೆ ಕೆಲಸವಿಲ್ಲದೇ ಇಲ್ಲಿ ಬಂದಿದಿನಾ” ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಬಸರೆಡ್ಡಿ ಮಾಲೀಪಾಟೀಲ್ ಅನಪೂರ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅನುಪೂರ ಕಳೆದ ಪಿಡಬ್ಲೂಡಿ ಇಲಾಖೆ ಸೇರಿದಂತೆ ಹಲವಾರು ಪ್ರಮುಖ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಸಭೆಗೆ ಗೈರು ಹಾಜಿರಾಗಿ ತಮ್ಮ ಆಧೀನ ಅಧಿಕಾರಿಗಳನ್ನು ಸಭೆ ಕಳಿಸಿದ್ದು ಅವರು ಕೂಡಾ ಅಪೂರ್ಣ ಮಾಹಿತಿ ಹೊಂದಿದ್ದರು. ಹಾಗಾಗಿ ಇಂದಿನ ಸಭೆಗೂ ಅಂತಹ ಅಧಿಕಾರಿಗಳು ಬಂದಿದ್ದರೆ ದಯವಿಟ್ಟು ಸಭೆಯಿಂದ ಹೊರಗೆ ಹೋಗಿ ಎಂದು ಆಕ್ರೋಶದಿಂದ ಹೇಳಿದರು.

ನಂತರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ನಿರ್ಮಿತಿ ಕೇಂದ್ರ, ಕೃಷಿ, ಸಂಗೋಪನಾ ಇಲಾಖೆ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ದಿ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಇದುವರೆಗೂ ಕೈಗೊಂಡ ಅಭಿವೃದ್ದಿ ಪರಿಶೀಲನೆ ನಡೆಸಿದರು.

ಕುಡಿಯುವ ನೀರು ಪೂರೈಕೆ, ಶುಧ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಹಾಸ್ಟೆಲ್- ಶಾಲೆ ಕೊಠಡಿಗಳ ನಿರ್ಮಾಣ ಸೇರಿದಂತೆ ಹಲವಾರು ಸಾರ್ವಜನಿಕ ಬಹುಪಯೋಗಿ ಕಾಮಗಾರಿಗಳು ನಿಧಾನಗತಿ ನಡೆದಿದೆ ಎಂದ ಅವರು, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

One thought on ““ನಾನೇನು ಬೇರೆ ಕೆಲಸವಿಲ್ಲದೇ ಇಲ್ಲಿ ಬಂದು ಕೂತಿದಿನಾ” ಅಧಿಕಾರಿಗಳ ವಿರುದ್ದ ಜಿಪಂ ಅಧ್ಯಕ್ಷ ಗರಂ

 • ಅಕ್ಟೋಬರ್ 24, 2017 at 3:47 ಅಪರಾಹ್ನ
  Permalink

  An outstanding share! I have just forwarded this onto a colleague who was doing
  a little homework on this. And he in fact ordered me breakfast due to the fact that I discovered it for him…
  lol. So allow me to reword this…. Thanks for the meal!! But
  yeah, thanx for spending the time to talk about this issue
  here on your site.

Comments are closed.