ಚಳಿಗಾಲಕ್ಕೆ ಬಾಡಿದ ತ್ವಚೆ ಮತ್ತು ಒಣಗಿದ ಕೂದಲಿಗೆ ಸಾಸಿವೆ ಎಣ್ಣೆ ಬಳಸಿ ನೋಡಿ..

ಚಳಿಗಾಲಕ್ಕೆ ಸ್ಕಿನ್ ಡ್ರೈ ಆಗುವುದು, ಕೂದಲು ಸಿಕ್ಕುಗೊಳ್ಳುವುದು, ಹೊಳಪು ಕಳೆದುಕೊಳ್ಳುವುದು ಇಂತೆಲ್ಲಾ ಅನುಭವ ಆಗುತ್ತವೆ. ಕಾಲಕಾಲಕ್ಕೆ ತ್ವಚೆ ಹಾಗೂ ಕೂದಲ ಆರೈಕೆ ಎಂದಿನಂತೆ ಇರುವುದಿಲ್ಲ. ಅತೀಯಾದ ಚಳಿಗೆ ತ್ವಚೆ ಒಣಗುವುದು ಹಾಗೂ ಕೂದಲು ಗಂಟು ಬೀಳುವುದು ಸಾಮಾನ್ಯ. ಇದಕ್ಕೆಲ್ಲಾ ಪರಿಹಾರವೇ ಸಾಸಿವೆ ಎಣ್ಣೆ.

ಹೌದು.. ಮುಖದ ಕಾಂತಿ ಹೆಚ್ಚಿಸಲು ಪಾರ್ಲರ್ ಮೊರೆ ಹೋಗೋದು ಕಾಮನ್. ಆದರಬದಲಿಗೆ ಸಾಸಿವೆ ಎಣ್ಣೆ ಬಳಕೆ ಮಾಡಿದರೆ ಹೇಗಿರುತ್ತೆ..? ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

 

ಮುಖದ ಕಾಂತಿ ಹೆಚ್ಚಿಸುವ ಸಾಸಿವೆ ಎಣ್ಣೆ – ಬೆಳಿಗ್ಗೆ ಮತ್ತು ಸಂಜೆ ಮುಖವನ್ನು ತೊಳೆದುಕೊಂಡಾಗ ಸಾಸಿವೆ ಎಣ್ಣೆ ಮುಖಕ್ಕೆ ಹಚ್ಚಿಕೊಳ್ಳುವುದು ಮುಖದ ಕಾಂತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಸಾಸಿವೆ ಎಣ್ಣೆಯಿಂದ ಸೌಂದರ್ಯ ಅನುಕೂಲತೆ ಹೆಚ್ಚು . ವಾರಕ್ಕೆ ಒಂದು ಬಾರಿ ಸಾಸಿವೆ ಎಣ್ಣೆಯಿಂದ ಬಾಡಿ ಮಸಾಜ್ ಮಾಡಿದರೆ ತ್ವಚೆ ಹೊಳಪು ಪಡೆಯುತ್ತೆ.

ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು. ಒಂದು ಸ್ಪೂನ್ ಮೊಸರು, ಒಂದು ಸ್ಪೂನ್ ಕಡ್ಲೆ ಹಿಟ್ಟು, ಅರ್ಧ ಸ್ಪೂನ್ ಸಾಸಿವೆ ಎಣ್ಣೆ ಮಿಕ್ಸ್ ಮಾಡಿ ತ್ವಚೆಗೆ ಹಚ್ಚಿದರೆ ಆರೋಗ್ಯಭರಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.

ಕೂದಲಿನ ಆರೈಕೆಗೆ ಸಾಸಿವೆ ಎಣ್ಣೆ ಬಳಸಿ. ರೇಷ್ಮೆಯಂತೆ ಕೂದಲು ಹೊಳೆಯಬೇಕು ಎಂದರೆ ಸಾಸಿವೆ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿದ ಬಳಿಕ ಶಾಂಪುವಿನಿಂದ ತೊಳಿಯಿರಿ. ಇದರಿಂದ ಸಾಸಿವೆ ಎಣ್ಣೆ ನಿರ್ಜೀವ ಕೂದಲಿಗೆ ಹೊಳಪು ನೀಡುತ್ತದೆ. ತಲೆ ಹೊಟ್ಟು ನಿವಾರಣೆ ಮಾಡಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.