ಪಂಜಾಬ್ ಸಚಿವ ನವಜೋತ್ ಸಿಂಗ್ ರ ರಾಜಕೀಯ ನಿವೃತ್ತಿ ಯಾವಾಗ..?

ಲೋಕಸಭಾ ಚುನಾವಣೆ ಮುಗಿದು ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾದರೂ, ಚುನಾವಣೆ ವೇಳೆ ಹೇಳಿದ್ದ ಹೇಳಿಕೆಗಳು ಮಾತ್ರ ಇನ್ನೂ ಗಿರಕಿ ಹೊಡೆಯುತ್ತಲೇ ಇವೆ.

ಇದರಲ್ಲಿ ಪ್ರಮುಖವಾಗಿ, ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಅಮೇಥಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ಅಮೇಥಿಯಿಂದ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು. ಇದೀಗ ಈ ಹೇಳಿಕೆಯನ್ನು ಇಟ್ಟುಕೊಂಡು ಸಿದ್ದು ಅವರ ರಾಜೀನಾಮೆ ಯಾವಾಗ ಎನ್ನುತ್ತಿದ್ದಾರೆ.

ಪಂಜಾಬ್‌ನ ಹಲವು ಭಾಗದಲ್ಲಿ ಇದೀಗ ಪೋಸ್ಟರ್‌ಗಳನ್ನು ಹಚ್ಚಿದ್ದು, ಸಿದ್ದು ಅವರೇ ನಿಮ್ಮ ಮಾತನ್ನು ಯಾವಾಗ ಉಳಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಸುದ್ದಿಗೋಷ್ಠಿಯಲ್ಲಿ ಸಿದ್ದು ಹೇಳಿದ್ದ ಮಾತನ್ನು ಸಹ ಪ್ರದರ್ಶನ ಮಾಡಿದ್ದಾರೆ.

ಚುನಾವಣಾ ಸುದ್ದಿಗೋಷ್ಠಿಯಲ್ಲಿ, ಒಂದು ವೇಳೆ ರಾಹುಲ್ ಗಾಂಧಿ ಅಮೇಥಿಯಿಂದ ಸೋತರೆ ರಾಜಕೀಯ ನಿವೃತ್ತಿ‌ ಘೋಷಿಸುವುದಾಗಿ‌‌ ಹೇಳಿದ್ದರು. ಇದೀಗ ಸ್ಮೃತಿ ಇರಾನಿ ವಿರುದ್ಧ ಭಾರಿ ಮುಖಭಂಗವನ್ನು ರಾಹುಲ್‌ ಅನುಭವಿಸಿರುವುದರಿಂದ ಸಿದ್ದುಗೆ ಈ ರೀತಿಯ ಒತ್ತಾಯಗಳು ಹೆಚ್ಚಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.