ಕಕ್ಷಿದಾರಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಪಿಪಿ..!

ತುಮಕೂರು ನ್ಯಾಯಾಲಯ ಆವರಣದಲ್ಲೆ ಎಸಿಬಿ ಭ್ರಷ್ಟಾಚಾರ ಬಯಲಿಗೆಳೆದಿದೆ. ಎಸಿಬಿ ಅಧಿಕಾರಿಗಳ ಬಲೆಗೆ  ಪಬ್ಲಿಕ್ ಪ್ರಾಸಿಕ್ಯೂಟರ್ ಸಿಕ್ಕಿಬಿದ್ದಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ನ್ಯಾಯಾಲಯ ಆವರಣದಲ್ಲಿ ಕಕ್ಷಿದಾರಿಂದ 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಪಿಪಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೆ ಇ‌ ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆಸಿದ್ದಾರೆ. ತಿಪಟೂರು ಮುನಿಸಿಫ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ 40000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ಅಕೌಂಟ್ ಮೂಲಕ ಪಡೆದಿದ್ದರು. 20 ಸಾವಿರ ಹಣ ನೇದವಾಗಿ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿದ್ದಾರೆ.  ಎಪಿಪಿ ಕಚೇರಿಯಲ್ಲೇ ಎಸಿಬಿ ಅಧಿಕಾರಿಗಳು ರಾತ್ರಿ 10.30 ರವೆರೆಗೆ ವಿಚಾರಣೆ ನಡೆಸಿದ್ದಾರೆ.
2015 ರಲ್ಲಿ ವಿದ್ಯುತ್ ಕಂಬ ವೃದ್ದೆ ಮೇಲೆ ಬಿದ್ದು ಕಾಲು ತುಂಡಾಗಿತ್ತು. ಈ ಪ್ರಕರಣದ ವಕಾಲತ್ತು ವಹಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್, ನೆನ್ನೆ ನ್ಯಾಯಾಲಯದ ಲ್ಲಿ ಖುಲಾಸೆಗೊಂಡಿತ್ತು. ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.