ಸಿ.ಎಂಗೆ ಆಹ್ವಾನ ಕೊಟ್ಟಿದ್ದೇವೆ, ಆದ್ರೆ ಪ್ರತಿಕ್ರಿಯಿಸಿಲ್ಲ, ಅವ್ರ ಕೋಪಕ್ಕೆ ಕಾರಣವೇನು ಗೊತ್ತಿಲ್ಲ : ಪೇಜಾವರ ಶ್ರೀ

ಉಡುಪಿ : ಜೂನ್‌ 15, 2017: ರಾಷ್ಟ್ರಪತಿಗಳ ಉಡುಪಿ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೃಷ್ಣಮಠದ ಪ್ರತಿನಿಧಿಗಳ ಮೂಲಕ ಆಹ್ವಾನ ನೀಡಿದ್ದೇವೆ. ಆದರೆ ಸಿಎಂ ನಮ್ಮ ಆಹ್ವಾನಕ್ಕೆ ಪ್ರತಿಕ್ರಿಯಿಸಿಲ್ಲ. ಕಾರ್ಯಕ್ರಮಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ಹೇಳಿದ್ದಾರೆ. ಗರುವಾರ ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು,  ಸಿಎಂ ಕಾರ್ಯದರ್ಶಿ ಉಡುಪಿ ಕಾರ್ಯಕ್ರಮಕ್ಕೆ ಅವರು ಬರುವುದಿಲ್ಲ ಎಂದು ಹೇಳಿದ್ದಾರೆ. ನಾವು ಯಾರಿಗೂ ಕೋಪ ಬರುವ ಕೆಲಸ ಮಾಡಿಲ್ಲ.  ಯಾಕೆ ಕೋಪ ಅಂತ ಗೊತ್ತಿಲ್ಲ.  ಮಠಕ್ಕೆ ಬರುತ್ತಾರೋ ಇಲ್ಲವೋ ಭಾನುವಾರ ಗೊತ್ತಾಗುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ಮಠಕ್ಕೆ ಭೇಟಿ ನೀಡದ ಕುರಿತು ಮಾತು ಮುಂದುವರೆಸುತ್ತಾ,   ನಮ್ಮ ಪರ್ಯಾಯಕ್ಕೆ ಆಹ್ವಾನ ಮಾಡಿದ್ದೆವು. ಅಲ್ಲದೆ ಹಲವು ಬಾರಿ ಮಠಕ್ಕೆ ಆಹ್ವಾನ ನೀಡಲಾಗಿದೆ. ಆದರೆ ಸಿ.ಎಂ ಇಲ್ಲಿಗೆ ಒಂದು ಬಾರಿಯೂ ಭೇಟಿ ನೀಡಿಲ್ಲ.  ನಾನು ಬರುವುದಿಲ್ಲ ಎಂದು ಸಿದ್ದರಾಮಯ್ಯನವರು ಎಂದಿಗೂ ಹೇಳಿಲ್ಲ ಆದರೆ ಪರ್ಯಾಯದ ನಂತರ ಕೃಷ್ಣನಿಗೆ ಕಾಣಿಕೆ ಕಳುಹಿಸಿದ್ದರು.  ಸಿಎಂ ಶ್ರೀಮತಿಯವರು ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಶ್ರೀಗಳು ವಿವರಿಸಿದರು.
ಸಿ.ಎಂ ಬೇಸರಕ್ಕೆ ಕಾರಣವೇನು ಎಂಬ ಬಗ್ಗೆ ವಿಶ್ಲೇಷಿಸಿ ಮಾತನಾಡಿದ ಶ್ರೀಗಳು,  ಕನಕಗೋಪುರ ವಿಚಾರದಲ್ಲಿ ಬೇಸರಕ್ಕೆ ಕಾರಣವಿಲ್ಲ, ಕಿಂಡಿ ಮೇಲಿನ ಗೋಪುರಕ್ಕೆ ಮೊದಲು ಆ ಹೆಸರೇ ಇರಲಿಲ್ಲ, ಕನಕನಿಗೆ ಉಡುಪಿಯಲ್ಲಿ ಬಹಳ ಗೌರವ ನೀಡಲಾಗುತ್ತಿದೆ. ಕನಕ ಮಂಟಪ, ಗೋಪುರ, ಮೂರ್ತಿ ಸ್ಥಾಪನೆಯಾಗಿದೆ. ಅಲ್ಲದೆ ಕನಕ ಜಯಂತಿ ಆಚರಿಸಲಾಗುತ್ತಿದೆ. ಸಿಎಂ ಅವರ ಜೊತೆ ಹಲವು ಭೇಟಿಯಾಗಿದೆ. ಮಂಗಳೂರು- ಬೆಂಗಳೂರು- ಮೈಸೂರಲ್ಲಿ ನಮ್ಮ ಭೇಟಿಯಾಗಿದೆ. ವರುಣಾ ಉಪಚುನಾವಣೆ ಸಂದರ್ಭ ಪ್ರಸಾದ ತೆಗೆದುಕೊಂಡು ಹೋಗಿದ್ದಾರೆ.  ಆದರೂ ಸಿಎಂ ಅವರ ಬೇಸರಕ್ಕೆ ಕಾರಣವೇನು ಎಂಬುದು ನಮಗೆ ತಿಳಿದಿಲ್ಲ ಎಂದರು. ಅಲ್ಲದೆ  ಸುತ್ತೂರು ಶ್ರೀಗಳು ಕೃಷ್ಣಮಠಕ್ಕೆ ಬರುವುದಾಗಿ ಹೇಳಿದ್ದು,  ಸಿಎಂ ಅವರನ್ನೂ ಜೊತೆ ಕರೆತರುವುದಾಗಿ ಹೇಳಿದ್ದಾರೆ ಎಂಬುದಾಗಿ ತಿಳಿಸಿದರು.

2 thoughts on “ಸಿ.ಎಂಗೆ ಆಹ್ವಾನ ಕೊಟ್ಟಿದ್ದೇವೆ, ಆದ್ರೆ ಪ್ರತಿಕ್ರಿಯಿಸಿಲ್ಲ, ಅವ್ರ ಕೋಪಕ್ಕೆ ಕಾರಣವೇನು ಗೊತ್ತಿಲ್ಲ : ಪೇಜಾವರ ಶ್ರೀ

Comments are closed.