ಮೈಸೂರು : ಅಧಿಕಾರಿಗಳ ಎಡವಟ್ಟು – ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲು

ಮೈಸೂರಿನ ಡ್ಯಾಂ ಅಧಿಕಾರಿಗಳ ಯಡವಟ್ಟಿನಿಂದಾಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಪೋಲಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ತಾರಕ ಜಲಾಶಯದಲ್ಲಿ ನಡೆದಿದೆ. ಕ್ರಸ್ಟ್‌ ಗೇಟ್ ಸರಿ ಇದೆಯಾ ಎಂದು ನೋಡಲು ಮುಂದಾಗಿದ್ದಾರೆ. ಅಧಿಕಾರಿಗಳ ಯಡವಟ್ಟಿಗೆ ಸಾವಿರಾರು ಕ್ಯೂಸೆಕ್ಸ್ ನೀರು ಹರಿದು ಹೋಗಿದೆ.

ವಾಪಸ್ ಗೇಟ್ ಮೇಲೆತ್ತಲಾಗದೆ ಅಧಿಕಾರಿಗಳ ಪರದಾಡಿದ್ದು, ಸ್ಥಳೀಯ ರೈತರಿಂದ ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತವಾಗಿದೆ. ನೀರು ಹೊರಹೋಗುವುದನ್ನ ನಿಲ್ಲಿಸಿ ಎಂದ ಸ್ಥಳೀಯ ರೈತರು ಹೇಳಿದ್ದಾರೆ. ಆದರೆ ತೆರೆದ ಗೇಟನ್ನು ಮುಚ್ಚಲಾಗದೇ ಅಧಿಕಾರಿಗಳು ಪರದಾಡುತ್ತಿದ್ದಾರೆ.

ರೈತರಿಂದ ಭಾರಿ ವಿರೋಧ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. 5 ವರ್ಷಗಳ ನಂತರ ಜಲಾಶಯ ತುಂಬಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಧಿಕಾರಿಗಳ ರೈತರ ನಡುವೆ ವಾಗ್ವಾದ ನಡೆದಿದ್ದು, ಭಾರಿ ಪ್ರಮಾಣದ ನೀರು ಪೋಲಾಗುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತವಾಗಿದೆ..
ರೈತರಿಗೂ ನೀಡದೆ ನೀರು ಮಣ್ಣುಪಾಲಾದಂತಾಗಿದೆ. ಹಿರಿಯ ಅಧಿಕಾರಿಗಳನ್ನ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.