ಹಫೀಜ್‌ ಸಯೀದ್‌ ಬಂಧನದ ಹಿಂದಿರುವ ಉದ್ದೇಶದ ಬಗ್ಗೆ ಅಮೆರಿಕ ಸಂದೇಹ ವ್ಯಕ್ತ

ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್‌ ಸಯೀದ್‌ ಬಂಧನದ ಹಿಂದಿರುವ ಉದ್ದೇಶದ ಬಗ್ಗೆ ಅಮೆರಿಕ ಸಂದೇಹ ವ್ಯಕ್ತಪಡಿಸಿದೆ. ಈ ಹಿಂದೆ ಹಫೀಜ್‌ ಸಯೀದ್‌ ಬಂಧಿಸಿದಾಗ ಆತನ ಚಟುವಟಿಕೆ ಹಾಗೂ ಆತನ ಉಗ್ರ ಸಂಘಟನೆ ಲಷ್ಕರ್‌- ಎ- ತೊಯ್ಬಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ ಎಂದು ಟಂಪ್‌ ಆಡಳಿತ ತಿಳಿಸಿದೆ.

‘ನಾವು ಈ ಹಿಂದೆ ಈ ರೀತಿ ಆಗಿದ್ದನ್ನು ನೋಡಿದ್ದೇವೆ. ಪಾಕಿಸ್ತಾನದಿಂದ ಸುಸ್ಥಿರ ಮತ್ತು ದೃಢ ನಿರ್ಧಾರವನ್ನು ನಾವು ನಿರೀಕ್ಷಿಸಿದ್ದೆವೆಯೇ ಹೊರತು ಚತುರ ಪ್ರದರ್ಶನವನ್ನಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮುಂದಿನ ವಾರ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ವಿಶ್ವ ಸಂಸ್ಥೆಯ ನಿಷೇಧಿತ ಉಗ್ರ ಸಯೀದ್‌ನನ್ನು ಬುಧವಾರ ಪಾಕಿಸ್ತಾನ ಬಂಧಿಸಿತ್ತು. 2011ರ ಬಳಿಕ ಸಯೀದ್‌ನನ್ನು ಪಾಕಿಸ್ತಾನ ಬಂಧಿಸಿರುವುದು 7ನೇ ಬಾರಿ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.