ವಸೂಲಿಗಿಳಿದ ನಂಬರ್ 1 ಚಾನೆಲ್..? – ಟಿವಿ9 ವಿರುದ್ಧ ದಾಖಲಾಯ್ತು FIR..!

ವಿಧಾನ ಪರಿಷತ್ ಸದಸ್ಯ ಎಚ್.ಎಂ ರಮೇಶ್ ಗೌಡ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದೂ ಅಲ್ಲದೇ, ಆ ಸುದ್ದಿ ಪ್ರಸಾರವನ್ನು ನಿಲ್ಲಿಸಲು 50 ಲಕ್ಷ ಬೇಡಿಕೆಯಿಟ್ಟಿರುವ ಆರೋಪದ ಮೇಲೆ ಟಿವಿ9 ವಾಹಿನಿಯ ಆಡಳಿತ ಮಂಡಳಿಯ ವಿರುದ್ಧ ದೂರು ನೀಡಲಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೋಲೀಸ್ ಠಾಣೆಯಲ್ಲಿ ಟಿವಿ9 ಸುದ್ದಿ ವಾಹಿನಿಯ ವಿರುದ್ಧ ರಮೇಶ್ ಗೌಡ ಅವರ ಸೋದರ ರಾಜೇಶ್ ದೂರು ದಾಖಲಿಸಿದ್ದಾರೆ. ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ನನಗೆ ಕರೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ರಾಜೇಶ್ ತಿಳಿಸಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟಿರುವ ವ್ಯಕ್ತಿಯೊಂದಿಗಿನ ಫೋನ್ ಸಂಭಾಷಭೆಯ ಆಡಿಯೋ ರೆಕಾರ್ಡಿಂಗ್ ಅನ್ನು ಕೂಡ ರಾಜೇಶ್ ಪೋಲೀಸರಿಗೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಪೋಲೀಸ್ ಠಾಣೆಯಲ್ಲಿ ಟಿವಿ9 ವಾಹಿನಿಯ 12 ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.