ಜಡ್ಜ್‌ಗಳ ಸುದ್ದಿಗೋಷ್ಠಿ ವಿಚಾರದಲ್ಲಿ ರಾಹುಲ್‌ ಗಾಂಧಿ ರಾಜಕೀಯ ಮಾಡ್ತಿದ್ದಾರೆ : ಅನಂತ್‌ ಕುಮಾರ್‌

ತುಮಕೂರು : ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸುದ್ದಿ ಗೋಷ್ಠಿ ವಿಚಾರ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ನನಗೆ ನೋವಾಗಿದೆ. ಕಳೆದ 70 ವರ್ಷದಲ್ಲಿ ಕಂಡರಿಯದ ಘಟನೆ ಇದಾಗಿದೆ. ನ್ಯಾಯಾಂಗ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತದೆ. ಮುಖ್ಯನ್ಯಾಯಮೂರ್ತಿ ಎನ್ನುವುದು ಸಂಸ್ಥೆ, ನಾಲ್ಕು ಗೋಡೆ ಮಧ್ಯೆ ಚರ್ಚೆಯಾಗಬೇಕಿತ್ತು. ಆದರೆ ವ್ಯತಿರಿಕ್ತವಾಗಿ ಈ ಘಟನೆ ಆಗಿರೋದು ಖೇದವಾಗಿದೆ. ರಾಹುಲ್ ಗಾಂಧಿ ಈ ವಿಚಾರದಲ್ಲೂ ರಾಜಕೀಯ ಮಾಡಿದ್ದಾರೆ. ಈ ವಿಚಾರ ಬಹಳ ನೋವಿನ ಸಂಗತಿ ಎಂದಿದ್ದಾರೆ.

ನ್ಯಾಯಾಂಗ ತನ್ನಿಂದ ತಾನೇ ದಾರಿಗೆ ಬರಲು ಅವಕಾಶ ಕೊಡಬೇಕು. ಈ ಸಮಸ್ಯೆಯನ್ನು ನ್ಯಾಯಾಂಗವೇ ಸರಿಪಡಿಸಿಕೊಳ್ಳುತ್ತದೆ. ಕೇಂದ್ರ ಸರ್ಕಾರ ನ್ಯಾಯಾಂಗದ ನಡುವೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.