ಕಾಂಪೌಂಡ್ ಕಂಬಿಗೆ ಬಿದ್ದು ಆನೆ ಸಾವು : ವೀರನಹೊಸಳ್ಳಿ ರೇಂಜ್ ಕ್ವಾಟ್ರಸ್ ಬಳಿ ಘಟನೆ

ಕಳೆದ ರಾತ್ರಿ ಕಾಂಪೌಂಡ್ ಕಂಬಿಗೆ ಬಿದ್ದು ಆನೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಗರಹೊಳೆಯ ವೀರನಹೊಸಳ್ಳಿ ರೇಂಜ್ ಕ್ವಾಟ್ರಸ್ ಬಳಿ ಈ ಘಟನೆ ನಡೆದಿದೆ. ನಾಗರಹೊಳೆ ಅರಣ್ಯ ಪ್ರದೇಶ. ವನ್ಯ ಜೀವಿಗಳು ಸುತ್ತಲ ಪ್ರದೇಶದಲ್ಲಿ ಓಡಾಡುತ್ತಿರುತ್ತವೆ. ಆದರೆ ಆನೆಯ ಸಾವು ನೋಡಿದರೆ ಸಹಜ ಸಾವು ಎಂದು ತೋರಿಕೆಗೆ ಕಾಣುತ್ತಿಲ್ಲ.

ಕಂಬಿಗೆ ಬಿದ್ದ ಆನೆಯ ಮೃತ ದೇಹ ಸಂಪೂರ್ಣವಾಗಿ ಬೆಂಡಾಗಿ ಹೋಗಿದೆ. ಇದನ್ನ ನೋಡಿದರೆ ಆನೆ ಆಯ ತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗುತ್ತಿದೆ.

ಕಬ್ಬಿಣದ ಕಾಂಪೌಂಡ ಗೆ ಬಿದ್ದ ಸ್ಥಿತಿಯನ್ನು ನೋಡಿದರೆ ಕರೆಂಟ್ ಶಾಟ್ ಹೊರೆಡಿರಬಹುದು ಎನ್ನುವ ಅನುಮಾನ ಶುರುವಾಗಿದೆ.ಆನೆಗಳ ಓಡಾಟ ಅಥವ ಆನೆಗಳ ಹಾವಳಿ ತಪ್ಪಿಸಲು ಅಲ್ಲಿನ ಜನರೇ ಈ ರೀತಿ ಮಾಡಿರಬಹುದು ಎನ್ನುವ ಅನುಮಾನವಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.