ಉಡುಪಿಯ ಮಲ್ಪೆ ಬೀಚ್ ನಲ್ಲಿ ಕಾಣೆಯಾದ ಮೀನುಗಾರರ ಕುಟುಂಬಸ್ಥರ ಆಕ್ರಂದನ – ಮೋದಿಗೆ ಮನವಿ

ಪ್ರತಿನಿತ್ಯ ಮೀನು ಹಿಡಿದುಕೊಂಡು ಬರುತ್ತಿದ್ದ ಮೀನುಗಾರರು ಉಡುಪಿಯ ಮಲ್ಪೆ ಬೀಚ್ ನಲ್ಲಿ ಕಾಣೆಯಾಗಿ ಇವತ್ತಿಗೆ 25 ದಿನಗಳಾಗಿವೆ. ಅವರನ್ನು ಹುಡುಕಿಕೊಡಲು ಕುಟುಂಬದವರು ಮೋದಿಗೆ ಕೈ ಮುಗಿದು ಮನವಿ ಮಾಡುತ್ತಿದ್ದಾರೆ.

ಹೌದು.. ಕಳೆದ ತಿಂಗಳು ಏಳು ಜನ ಮೀನುಗಾರರಲು ಮೀನು ಹಿಡಿಯಲು ಉಡುಪಿಯ ಮಲ್ಪೆ ಸಮುದ್ರಕ್ಕಿಳಿದಿದ್ದರು. ಹೀಗೆ ಹೋದವರು 25 ದಿನಗಳಾದರೂ ವಾಪಸ್ ಬಂದೇ ಇಲ್ಲ. ಹೀಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಕೆಲಸ ಕಾರ್ಯ ಬಿಟ್ಟ ಮೀನುಗಾರರು ಆಳ ಸಮುದ್ರಕ್ಕಿಳಿಯಲು ಹಿಂದೇಟು ಹಾಕುತಿದ್ದಾರೆ. ಉಡುಪಿಯ ಮಲ್ಪೆ ಬಂದರು ಬಳಿ ಸಾಲುಗಟ್ಟಿ ಬೋಟ್ ಗಳನ್ನ ನಿಲ್ಲಿಸಿ ನೀರಿಗಿಳಿಸದೇ ನಿಲ್ಲಿದಿದ  90% ರಷ್ಟು ಮೀನುಗಾರರು ಕಾಣೆಯಾದ ಏಳು ಜನ ಮೀನೂಗಾರರನ್ನು ಹುಡುಕಿಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಏಳು ಜನ ಮೀನುಗಾರರನ್ನು ಉಗ್ರಗಾಮಿಗಳು ಅಪಹರಣ ಮಾಡಿರಬಹುದು ಎನ್ನುವ ಶಂಕೆ ಹಾಗೂ ಹೊರ ದೇಶದವರು ಕೂಡ ಕಿಡ್ನಾಪ್ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿರುವ ಮೀನುಗಾರರು ಕಾಣೆಯಾದವರನ್ನು ಹುಡುಕಿಕೊಡುವವರೆಗೆ ಹೋರಾಟ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಆತಂಕದ ಛಾಯ ಮನೆ ಮಾಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.