ಕೊನೆ ಕ್ಷಣದಲ್ಲಿ ರದ್ದಾದ ಬಿಜೆಪಿ ರಾಜ್ಯಾಧ್ಯಕ್ಷರ ಸಭೆ : ಮಗನ ಮೇಲೆ ಕೋಪಗೊಂಡ ಯಡಿಯೂರಪ್ಪ

ನವದೆಹಲಿಯಲ್ಲಿ ಇಂದು ಏರ್ಪಡಿಸಲಾಗಿದ್ದ ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಸಭೆ ಕೊನೆ ಕ್ಷಣದಲ್ಲಿ ರದ್ದಾಗಿದ್ದು ಈ ಬಗ್ಗೆ ಮಾಹಿತಿ ನೀಡದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ದ ಕೋಪಗೊಂಡಿದ್ದಾರೆ.

ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಬಿಜೆಪಿ ಸಂಸದರ ಸಭೆ ನಡೆಯಬೇಕಾಗಿತ್ತು. ಇದರಲ್ಲಿ ಭಾಗವಹಿಸುವ ಸಲುವಾಗಿ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನವದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ದೆಹಲಿ ತಲುಪಿದ ಬಳಿಕ ಸಭೆ ರದ್ದಾಗಿರುವ ವಿಷಯ ತಿಳಿದು ಬಂದಿದೆ. ದೆಹಲಿಯಲ್ಲೇ ಇದ್ದ ತಮ್ಮ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಈ ಕುರಿತು ಮಾಹಿತಿ ನೀಡದಿರುವುದಕ್ಕೆ ಯಡಿಯೂರಪ್ಪ ಪುತ್ರನ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ.

ಆದರೆ ಸಭೆ ರದ್ದಾದ ಮಾಹಿತಿ ತಿಳಿದ ಸಂದರ್ಭದಲ್ಲಿ ಯಡಿಯೂರಪ್ಪನವರು ಆಗಲೇ ದೆಹಲಿ ವಿಮಾನ ಏರಿದ್ದರೆಂದು ಹೇಳಲಾಗಿದ್ದು, ವಿಮಾನದಲ್ಲಿದ್ದ ಹಿನ್ನೆಲೆ ಸಂಪರ್ಕಕ್ಕೆ ಸಾಧ್ಯವಾಗಿರಲಿಲ್ಲ.  ಹೀಗಾಗಿ ಬಿ.ವೈ. ರಾಘವೇಂದ್ರ, ಯಡಿಯೂರಪ್ಪನವರಿಗೆ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ  ಸಭೆ ರದ್ದಾದ ವಿಷಯ ನನಗೆ ಏಕೆ ಹೇಳಲಿಲ್ಲ. ಈ ವಿಚಾರವನ್ನ ಮೊದಲೇ ಹೇಳಿದ್ದರೇ ನಾನುದೆಹಲಿಗೆ ಬರುತ್ತಿರಲಿಲ್ಲ ಎಂದು ಬಿಎಸ್ ವೈ ತಮ್ಮ ಪುತ್ರನ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.