ಜನವರಿಯಲ್ಲಿ ಶರಪೋವಾ ಮತ್ತೆ ಅಂಕಣಕ್ಕೆ..?

ಮಾಸ್ಕೋ: ಮಾದಕ ವಸ್ತು ಸೇವನೆ ಆರೋಪದ ಮೇಲೆ ಎರಡು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿರುವ ಐದು ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಪಡೆದಿರುವ ಮರಿಯಾ ಶರಪೋವಾ, ಜನವರಿಯಲ್ಲಿ ಮತ್ತೆ ಟೆನಿಸ್ ಅಂಕಣಕ್ಕೆ ಇಳಿಯಲಿದ್ದಾರೆಂದು ರಷ್ಯಾ ಟೆನಿಸ್ ಫೆಡರೇಶನ್ (ಆರ್‌ಟಿಎಫ್) ಅಧ್ಯಕ್ಷ ಶಮಿಲ್ ಟಾರ‍್ಪಿಸಿಚಿವ್ ಹೇಳಿದ್ದಾರೆ.

‘ಈ ಕುರಿತು ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಿರ್ಧಾರವಾಗಲಿದೆ. ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗದಿದ್ದರೂ ಜನವರಿ ತಿಂಗಳಲ್ಲಿ ಆಕೆ (ಮರಿನಾ) ಮತ್ತೆ ಅಂಕಣಕ್ಕೆ ಮರಳುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಆರ್‌ಟಿಎಫ್ ಅಧ್ಯಕ್ಷರು ಹೇಳಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

maria sharapova 11

ಜನವರಿ ತಿಂಗಳಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಸಮಯದಲ್ಲಿ ಮರಿಯಾ ಶರಪೋವಾ ಮಾದಕ ವಸ್ತು ಸೇವಿಸಿರುವುದು ಪರೀಕ್ಷೆಯಿಂದ ರುಜುವಾತಾಗಿದ್ದರಿಂದ ಅವರು  ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಒಳಗಾದರು.

 

ನಿಷೇಧ ಶಿಕ್ಷೆಗೆ ಒಳಗಾದ ಮರಿಯಾ ಶರಪೋವಾ ಅವರ ಹೆಸರನ್ನು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದ ರಷ್ಯಾ ತಂಡಕ್ಕೆ ಶಿಫಾರಸು ಮಾಡಲಾಗಿತ್ತಾದರೂ, ಕ್ರೀಡಾ ವಿವಾದ ನ್ಯಾಯಾಲಯ (ಸಿಎಎಸ್) ಮರಿಯಾ ತಮ್ಮ ಮೇಲೆ ವಿಧಿಸಲಾಗಿರುವ ನಿಷೇಧ ಶಿಕ್ಷೆ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ವಿಚಾರಣೆ ಕುರಿತಾದ ತೀರ್ಪನ್ನು ಸೆಪ್ಟೆಂಬರ್ ೧೯ ರಂದು ನೀಡಲಿದ್ದರಿಂದ ಅವರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಲಭಿಸಲಿಲ್ಲ.

 

ನಿಷೇಧ ಶಿಕ್ಷೆಯ ವಿರುದ್ಧ ಮರಿಯಾ ಶರಪೋವಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್), ಜೂನ್ ತಿಂಗಳಲ್ಲಿ ನಿಷೇಧ ಶಿಕ್ಷೆ ರದ್ದುಪಡಿಸುವುದಾಗಲಿ ಇಲ್ಲವೇ ನಿಷೇದ ಅವಧಿಯನ್ನು ಕಡಿಮೆ ಮಾಡಲು ನಿರಾಕರಿಸಿತು.

Comments are closed.