ಕಾವೇರಿ ನೀರು ಬಿಡುವಂತೆ ಸಿಎಂಗೆ ಕೇಳಿಕೊಂಡ ತಮಿಳುನಾಡು ರೈತರು

ತಮಿಳುನಾಡಿನ ರೈತ ಮುಖಂಡರು ಬಂದು ಕರ್ನಾಟಕದ ಸಿಎಂ ಭೇಟಿ ಮಾಡಿದ್ದೇವೆ. ನೀರು ಬಿಡುವಂತೆ ಸಿಎಂಗೆ ಮನವಿ ಮಾಡಿದ್ದೇವು. ನಮ್ಗೆ ನೀರಿಲ್ಲ, ಮಳೆ ಉತ್ತಮವಾದ್ರೆ ನೀರು ಬಿಡುವ ಭರವಸೆ ಸಿಎಂ ನೀಡಿದ್ದಾರೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರೋ ವಿಚಾರ. ನಮ್ಮಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನಾವು ತಮಿಳುನಾಡಿನ ರೈತರು ಹೀಗಾಗಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದೇವೆ. ತಮಿಳುನಾಡು ಸರ್ಕಾರ ಏನು ಮಾಡಲಿದೆ ನಮಗೆ ಗೊತ್ತಿಲ್ಲ. ತಮಿಳುನಾಡಿನ ರೈತರ ಪರವಾಗಿ ನಾವು ರೈತರು ಮುಖಂಡು ಬಂದು ಮನವಿ ಮಾಡಿದ್ದೇವೆ ಅಂತ ಸಿಎಂ ಭೇಟಿ ಬಳಿಕ ತಮಿಳುನಾಡಿನ ರೈತ ಮುಖಂಡ ನಲ್ಲಗೌಡರ್ ಹೇಳಿದ್ರು.

krs

ಕಾವೇರಿ ಕಾವಿಗೆ ಉಭಯ ಸದನಗಳ ಸಭೆ ಕರೆದ ಮುಖ್ಯಮಂತ್ರಿ

ಈ ನಡುವೆ ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ತೀವ್ರ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಆಗಸ್ಟ್ 27ರಂದು ವಿಧಾನ ಮಂಡಲದ ಉಭಯ ಸದನ ನಾಯಕರ ಸಭೆ ಕರೆದಿದ್ದಾರೆ.
ಅಂದು ಬೆಳಗ್ಗೆ 11.30ಕ್ಕೆ ನಡೆಯುವ ಸಭೆಯಲ್ಲಿ ವಿಧಾನ ಮಂಡಲ ಉಭಯ ಸದನ ನಾಯಕರು, ಕೇಂದ್ರದ ಸಚಿವರು, ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ.
ಸಾಂಬಾ ಬೆಳೆಗೆ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಒತ್ತಾಯಿಸುತ್ತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಸಂಕಷ್ಟ ಉಂಟಾಗಿದೆ. ಜೊತೆಗೆ ಆ ಭಾಗದ ರೈತರೂ ತೊಂದರೆಗೆ ಒಳಗಾಗಿದ್ದಾರೆ. ಈ ಎಲ್ಲದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

Comments are closed.