ತಾಲಿಬಾನ್ ಜತೆ ಭಾರತ ನಡೆಸಲಿದೆ ಮಾತುಕತೆ : ಇಂತಹ ಬೆಳವಣಿಗೆ ಇದೇ ಮೊದಲು

ಇದೇ ಮೊದಲ ಬಾರಿಗೆ ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿದೆ. ಆದರೆ ಇದು ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಅಧಿಕೃತ ಮಾತುಕತೆಯಲ್ಲ. ಮಾಸ್ಕೋದಲ್ಲಿ ಶನಿವಾರ ನಡೆಯಲಿರುವ ಬಹುಶೃಂಗ ಸಭೆಯಲ್ಲಿ ಈ ಅಧಿಕಾರೇತರರ ಮಾತುಕತೆ ನಡೆಯಲಿದೆ.

ರಷ್ಯಾವು ಆಫ್ಘಾನಿಸ್ತಾನ ಕುರಿತಂತೆ ಶಾಂತಿ ಮಾತುಕತೆ ಆಯೋಜಿಸುತ್ತಿದ್ದು, ಇದರಲ್ಲಿ ಭಾರತ, ಅಮೆರಿಕ, ಪಾಕಿಸ್ತಾನ ಹಾಗೂ ಚೀನಾ ದೇಶಗಳು ಪಾಲ್ಗೊಳ್ಳುತ್ತಿವೆ. ತಾಲಿಬಾನ್ ಕೂಡಾ ಮಾತುಕತೆಯ ಭಾಗವಾಗಿರಲಿದೆ.

ಆಫ್ಘಾನಿಸ್ತಾನದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಅಮರ್ ಸಿನ್ಹಾ ಹಾಗೂ ಪಾಕಿಸ್ತಾನದಲ್ಲಿ ಭಾರತೀಯ ಹೈ ಕಮಿಶನರ್ ಆಗಿದ್ದ ಟಿ.ಸಿ.ಎ.ರಾಘವನ್ ಅವರು ಅಧಿಕಾರೇತರ ಮಟ್ಟದ ಈ ಮಾತುಕತೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನು ಸ್ವತಃ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ದೃಢಪಡಿಸಿದ್ದಾರೆ. ವ್ಲಾದಿಮಿರ್ ಪುಟಿನ್ ಅವರು ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದಾಗ ಈ ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.