ಯುವ ದಿನ ಪ್ರಯುಕ್ತ- ಯುವಕರಿಗೆ ನಮ್ಮದೊಂದು ಪ್ರೇರಣೆ!

ಡಾ.ಭಾಗ್ಯಜ್ಯೋತಿ ಕೋಟಿಮ

ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಶಿರೂರು

ತಾ. ನವಲಗುಂದ

ಜಿ.ಧಾರವಾಡ

12ರಂದು ವಿವೇಕಾನಂದ ಅವರ ಜನ್ಮದಿನಾಚರಣೆ ಕುರಿತು ಲೇಖನ

“ಹೋರು ಧೀರತೆಯಿಂದ, ಮೊಂಡುತನದಿಂ ಬೇಡ

ವೈರ ಹಗೆತನ ಬೇಡ, ಹಿರಿ ನಿಯಮವಿರಲಿ

ವೈರಾಗ್ಯ ಕಾರುಣ ಮೇಳನವೆ ಧೀರತನ

ಹೋರುದಾತ್ತತೆಯಿಂದ ಮಂಕುತಿಮ್ಮ”

ನಿಸ್ವಾರ್ಥತೆಯ ಮೈಗೂಡಿ ವೈರಾಗ್ಯ ಕಾರುಣ್ಯಗಳಿಂದ ಸರಳ ಸಜ್ಜನಿಕೆಯಿಂದ ಭಾರತ ಮಾತೆಯ ಸುಪುತ್ರನಾಗಿ, ದೂತನಾಗಿ ಭಾರತ ಮಾತೆಯ ಸಂದೇಶವನ್ನು ಇಡೀ ಪ್ರಪಂಚಕ್ಕೆ ತನ್ನ ಅಸ್ತಿತ್ವದ ಅರಹನ್ನು ತನ್ನ ತಾಯ್ನೆಲದ ಘಮಘಮಿಸುತವಿಕೆಯನ್ನು ಇಡೀ ಪ್ರಪಂಚದಾದ್ಯಂತ ಸಾರಿದ ಎಂದೆಂದಿಗೂ ಎಲ್ಲರಿಗೂ ಆದರ್ಶಮಯ, ಮೆಚ್ಚುಗೆ ಪ್ರಿಯ, ವೀರ ಸಂನ್ಯಾಸಿ ವಿವೇಕಾನಂದ.

ಹೌದು ಒಬ್ಬೊಬ್ಬರ ಹುಟ್ಟೇ ಹಾಗೆ ತಾವು ತಮಗಾಗಿ ಅಲ್ಲ, ತಮ್ಮ ಮನೆತನಕ್ಕಾಗಿ ಅಲ್ಲ, ಇಡೀ ಸಮಾಜಕ್ಕೆ ಜೀವಿಸಿ, ಎಂದೆಂದಿಗೂ ಸಾಯದ ನಶ್ವರತೆಯೇ ಇಲ್ಲದ ಅಮರತ್ವದ ಪ್ರತೀಕವಾಗಿ ಎಲ್ಲರ ಮನ-ಮನದಲ್ಲೂ ಎಂದೆಂದಿಗೂ ತಮ್ಮ ಸಾಧನೆಯ ಜ್ಯೋತಿಯನ್ನು ಬೆಳಗಿಸುತ್ತಾ ದೇದಿಪ್ಯಮಾನ್ಯವಾಗಿರುತ್ತಾರೆ.

ಅದಕ್ಕೆ ಡಾ. ಜಿ.ಎಸ್.ಶಿವರುದ್ರಪ್ಪ, ವಿವೇಕಾನಂದರು ಈ ರೀತಿ ಹೇಳುತ್ತಾರೆ.

“ರಾಮಕೃಷ್ಣರು ದಿವ್ಯ ಯೋಗಧನುವಿಗೆ ತೊಟ್ಟ ಬ್ರಹ್ಮಾಸ್ತ್ರ ನೀನು

ವಿಶ್ವದಂತಸ್ಸತ್ಪ ಮೂರ್ತಿಗೊಂಡಿಳೆಗಿಳಿದ ಕ್ರತುಶಕ್ತಿ ನೀನು

ಸಂಶಯದ ದುರ್ಗವನು ಸೀಳಿ ಶ್ರದ್ಧೆಯ ಧ್ವಜವ ನಟ್ಟ ವಿಜಿಗೀಷು

ಪರಮಹಂಸಾಚಲದ ಶಿವಗಂಗೆಯನು ತಂದು

ಜಗಕೆಲ್ಲ ಹರಿಸಿರುವ ಯೋಗ ಪುರುಷ ಎಂದು”

ಹೌದು ಜಗವೇ ಮತ್ತೊಮ್ಮೆ ಮತ್ತೊಮ್ಮೆ ಭಾರತದೆಡೆ ನೋಡುವಂತೆ ಮಾಡಿದವರು ಇವರು. “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸೀ” ಎಂಬುದನ್ನು ಆಚರಿಸಿ ತೋರಿಸಿದವರು. ಇವರು ಅದಕ್ಕಾಗಿಯೇ ಅವರು ಸಂನ್ಯಾಸಿ ಎನ್ನುವದಕ್ಕಿಂತ ವೀರ ಸಂನ್ಯಾಸಿ, ಯೋಧ ಸಂನ್ಯಾಸಿ ಎನ್ನುವುದೇ ಮೇಲು.

ಅವರು ನೀಡಿದ ಸಂದೇಶಗಳು ನಮ್ಮ ಯುವ ಜನತೆಗೆ ಇಂದಿಗೂ ಮಾದರಿ. ಅದೇ ರೀತಿ ಅವರ ಒಂದು ಸಂದೇಶ ನೋಡಿ.

‘I am not handsome’ ನಾನು ಸುಂದರವಾಗಿಲ್ಲ.

‘But I can give my hands to some one who need help’

ಅಂದರೆ ದರಿದ್ರೋ ನಾರಾಯಣೋ ಹರಿ ದೀನ ದಲಿತರ ಸೇವೆಯೇ ನಮ್ಮ ಪರಮೋಚ್ಛ ಗುರಿ ಎಂಬುದನ್ನು ಅವರ ಆಚರಿಸಿ ತೋರಿಸಿದರು. ನುಡಿದಂತೆ ನಡೆಯುವ ಅವರ ಜೀವನಶೈಲಿಯೇ ಅವರ ಆತ್ಮ ವಿಶ್ವಾಸದ ಮೆರಗಾಗಿತ್ತು. ಅವರು ಮುಖ್ಯವಾಗಿ ಸಕಲ ವಿದ್ಯಾ ಪಾರಂಗತರು. ಅದಕ್ಕೆ ಮುಖ್ಯವಾಗಿ ಬೇಕಾದ ಆತ್ಮವಿಶ್ವಾಸ ಅವರಲ್ಲಿತ್ತು. ಸಂಸ್ಕೃತ, ತರ್ಕಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಮಿಮಾಂಸಿ ಇವುಗಳನ್ನು ಸತತ ಶ್ರದ್ಧೆಯ ಮೂಲಕ ಸಿದ್ಧಿಸಿಕೊಂಡಿದ್ದರು. ಜೊತೆಗೆ ಸುಂದರ ಕಂಠ ದ್ರಾಷ್ಠತೆಯೂ ಅವರಲ್ಲಿತ್ತು. ರಾಗಬದ್ಧವಾಗಿ ಹಾಡುವದರೊಂದಿಗೆ ಅವರ ಉತ್ತಾಲ ಧ್ವನಿ ಗಾಂಭೀರ್‍ಯತೆಯ ವಾಕ್ ಚಾತುರ್ಯ ಅಷ್ಟೇ ಅಲ್ಲ ಗಾಂಭೀರ್‍ಯತೆಯೊಂದಿಗೆ ಹಾಸ್ಯ ವಿನೋದ ರಸಿಕತೆ, ಗಾನ ಮಾಧುರ್ಯ ಕೇಳುಗರನ್ನು ಮಂತ್ರಮುಗ್ಧವೇಗೊಳಿಸಿ ಬಿಡುತ್ತಿತ್ತು.

” ಏನಿತು ನೀಂ ಗೆಲಿದೆಯಂದೆನರು ಬಲ್ಲವರೆಂದು

ಮೆನಿತು ನೀಂ ಪೋರ್‍ದೆ ಯೆನಿತನು ಪೊತ್ತೆಯೆನುದರ್

ಗಣನೆ ಸಲುವುದು ತೋರ್‍ದ ಪೌರುಷಕೆ, ಜಯಕಲ್ಲ

ದಿನದಿನದ ಗರಡಿಯೀರು ಮಂಕುತಿಮ್ಮ”

ಕೇವಲ ಬಾಹ್ಯ ಆಡಂಬರಕ್ಕೆ ಮಾತ್ರವಲ್ಲದೆ ಒಳಗಿನ ಅಂತಃ ಸತ್ವದಿಂದ, ದೈವಬಲ, ಗುರುಬಲದಿಂದ ಎಲ್ಲಕ್ಕೂ ಮೀಗಿಲಾಗಿ ತನ್ನತನದ ಆತ್ಮವಿಶ್ವಾಸದಿಂದ ಎತ್ತರ-ಬಹು ಎತ್ತರಕ್ಕೆ ಏರಿದ ವ್ಯಕ್ತಿ.

ಏಕೆಂದರೆ ಜೀವನ ಶಾಶ್ವತಲ್ಲ. ಕೇವಲ ನಮ್ಮ ಸ್ವಾರ್ಥತಿಕ ಹಣ, ಅಂತಸ್ತು ಗಳಿಸುವದೇ ಮಾತ್ರ ಜೀವನವಲ್ಲ. ನಮ್ಮ ಬದುಕು ಕೇವಲ ನಮಗೆ ಮಾತ್ರವಲ್ಲ. ಅದರಲ್ಲಿ ಇತರರಿಗೂ ಪಾಲಿದೆ ಹಾಗಾದರೆ ಮಾತ್ರ ನಾವು ನಮ್ಮ ಜೀವನದ ಸಮೃದ್ಧತೆ ಕಾಣಬಹುದು.

ಅಗಾಧ ಜ್ಞಾನ ಭಂಡಾರವನ್ನೇ ಹೊಂದಿದ್ದ, ಅವರ ಪ್ರತಿಭೆಗೆ ವಿಶ್ವ ಅವರಿಗೆ ಕೇಳಿದ್ದನ್ನೇ ನೀಡಲು ತಯಾರಾಗಿತ್ತು. ಆದರೆ ಅದೆಲ್ಲವನ್ನೂ ತ್ಯಜಿಸಿ ಭಾರತ ಮಾತೆಯ ಆತ್ಮೋದ್ಧಾರಕ್ಕೆ ದುಡಿದ ಮಹನೀಯರ ಕುರಿತು ಹೀಗೊಂದು ಮಾತಿದೆ ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ, ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಬೇಕೆಬೇಕು. ಇಂಥ ದಿವ್ಯ ವ್ಯಕ್ತಿತ್ವ ನಮಲ್ಲರಿಗೆ ಮಾದರಿಯಾಗಲೆಂದು ಅವರ ಜನ್ಮ ದಿನದಂದು ನಮ್ಮದೊಂದು ಆಶಯ

Comments are closed.