Supreme court : ಅನರ್ಹತೆ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಬ್ರೇಕ್, ತುರ್ತು ವಿಚಾರಣೆಗೆ ನಕಾರ,,

ಶಾಸಕತ್ವಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ನಿಷೇಧ ಕಾಯಿದೆಯಡಿ ಅನರ್ಹಗೊಂಡಿರುವ ಮಾಜಿ ಶಾಸಕರ ಆಸೆಗೆ ಸುಪ್ರೀಂ ಕೋರ್ಟು ತಣ್ಣೀರೆರಚಿದೆ.
ತಮ್ಮನ್ನು ಅನರ್ಹಗೊಳಿಸಿದ ಮಾಜಿ ಸ್ಪೀಕರ್‍ ರಮೇಶ್ ಕುಮಾರ್‍ ಅವರ ಕ್ರಮದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಎಲ್ಲ ೧೭ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರಿಂ ಕೋರ್ಟ್‌ ಒಲ್ಲೆ ಎಂದಿದೆ.

ಇದರಿಂದ ಅನರ್ಹತೆಗೆ ಕನಿಷ್ಟ ತಡೆ ತಂದು ವಾರಾಂತ್ಯ ನಡೆಯಲಿರುವ ಬಿಎಸ್ವೈ ಸಚಿವ ಸಂಪುಟದಲ್ಲಿ ಸ್ಥಾಣ ಗಿಟ್ಟಿಸಿಕೊಳ್ಳಬಹುದು ಎಂದು ಹಲವು ಅನರ್ಹರಿಗೆ ಆಸೆ ಸದ್ಯಕ್ಕೆ ಕಮರಿದೆ.

ತಮ್ಮನ್ನು ಅನರ್ಹಗೊಳಿಸಲಾದ ಬೆನ್ನಲ್ಲಿಯೇ ಅರ್ಜಿ ಗುಜರಾಯಿಸಿದ್ದ ಅನರ್ಹ ಶಾಸಕರು ತಮ್ಮ ಅಹವಾಲನ್ನು ಆದಷ್ಟು ಶೀಘ್ರ ಆಲಿಸಿ ನ್ಯಾಐ ಕೊಡುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಪುರಸ್ಕರಿಸದ ಸುಪ್ರೀಂ ಕೋರ್ಟು ತುರ್ತು ವಿಚಾರಣೆಗೆ ನಕಾರ ಹೇಳಿದೆ.

ಕೂಡಲೇ ಅರ್ಜಿ ವಿಚಾರಣೆಯ ಮನವಿಯನ್ನು ತಿರಸ್ಕರಿಸಿದ ಸುಪ್ರಿಂ ಕೋರ್ಟು ಶೀಘ್ರದಲ್ಲಿಯೇ ವಿಚಾರಣೆ ದಿನಾಂಕ ನಿಗದಿ ಮಾಡುವುದಾಗಿ ಹೇಳಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.