ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 26 ಜನ ಸಿಆರ್‌ಪಿಎಫ್‌ ಯೋಧರು ಬಲಿ, ಪ್ರಧಾನಿ ಖಂಡಿನೆ..

ರಾಯ್‌ಪುರ:  ಛತ್ತೀಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿ ನಕ್ಸಲರ ಗುಂಡಿನ ದಾಳಿಗೆ 26 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ನಕ್ಸ್ಅಲ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೊಂದು ಹೇಡಿತನದ ಕೃತ್ಯ ಹಾಗೂ ಶೋಚನೀಯವಾದದ್ದು. ಹುತಾತ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.
ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಸತತವಾಗಿ ನಕ್ಸಲ್‌ ಚಟುವಟಿಕೆಗಳು ನಡೆಯುತ್ತಿದ್ದು,  ಸೋಮವಾರ ನಕ್ಸಲರ ದಾಳಿಗೆ 24 ಜನ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿದ್ದು,  ಮಧ್ಯಾಹ್ನ ನಡೆದ ಈ ಚಕಮಕಿಯಲ್ಲಿ 24 ಮಂದಿ ಯೋಧರು ಅಸುನೀಗಿದ್ದಾರೆ.  ಅಲ್ಲದೆ ಈ ದಾಳಿಯಿಂದ ಆರು ಮಂದಿ ಸಿಆರ್ ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನ ಚಿಕಿತ್ಸೆಗೆ ಕರೆತರುವುದಕ್ಕಾಗಿ ಹೆಲಿಕಾಫ್ಟರ್‌ನ್ನ ಬಳಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯೋಧರನ್ನ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಘಟನೆ ನಡೆದ ಸ್ಥಳದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಕಳೆದ ತಿಂಗಳು ಮಾರ್ಚ್‌ 12ರಂದು ಸುಕ್ಮಾ ಜಿಲ್ಲೆಯಲ್ಲಿಯೇ ನಕ್ಸಲರ ದಾಳಿಗೆ  12 ಜನ ಸಿಆರ್‌ಪಿಎಫ್‌ ಯೋಧರು ಹತ್ಯೆಗೀಡಾಗಿದ್ದು, ನಾಲ್ಕುಜನ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.  ಈ ದಾಳಿಯನ್ನ ಕಳೆದ ಎರಡು ವರ್ಷಗಳಲ್ಲಿ ನಡೆದ ಮಾವೋವಾದಿಗಳ ಅತಿದೊಡ್ಡ ದಾಳಿ ಎನ್ನಲಾಗಿತ್ತು. ಆದರೆ, ಇಂದು ನಡೆದ ದಾಳಿಯಲ್ಲಿ 24 ಮಂದಿ ಸಿಆರ್‌ಪಿಎಫ್‌ ಯೋಧರು ಮೃತಪಟ್ಟಿದ್ದು, ಅದಕ್ಕಿಂತ ದೊಡ್ಡ ದಾಳಿ ಘಟಿಸಿದೆ.

Comments are closed.