ಚೀನಾದಲ್ಲಿ ಕಾಣಿಸಿಕೊಂಡಿದೆ ಮನುಷ್ಯನ ಮುಖ ಹೋಲುವ ಸ್ಪೈಡರ್ ಮೆನ್..!

ಚೀನಾದಲ್ಲಿ ಕಾಣಿಸಿಕೊಂಡಿದೆ  ಸ್ಪೈಡರ್ ಮೆನ್..! ಹೀಗೆಂದ ಕೂಡ್ಲೆ ಹೌಹಾರಬೇಡಿ. ಮನುಷ್ಯನ ಮುಖ ಹೋಲುವ ಜೇಡವೊಂದು ಕಾಣಿಸಿಕೊಂಡಿದೆ. ಅದು ಕೂಡ ಚೀನಾದ ಮನೆಯೊಂದರ ಸಸಿಯ ಕುಂಡದಲ್ಲಿ.

ಜೇಡ ಅಂದ್ರೆ ಭಯಪಡುವಂತವರಿಗೆ, ಮನುಷ್ಯನ ಮುಖ ಹೋಲುವ ಜೇಡ ಕಾಣಿಸಿಕೊಂಡು ಬಿಟ್ರೇ? ಮೈ ಜುಮ್ ಅನ್ನದೇ ಇರೋಕೆ ಸಾಧ್ಯವಿಲ್ಲ.

ಚೀನಾದ ಹುನಾನ್ ಪ್ರಾಂತ್ಯದ, ಲಿಫೌಂಡ್ ಎಂಬುವರ ಸಸಿಯ ಕುಂಡದಲ್ಲಿ ಈ ಜೇಡ ಕಾಣಿಸಿಕೊಂಡಿದೆ. ಆ ಜೇಡದ ಹಿಂದಿನ ಭಾಗದಲ್ಲಿ ಮನುಷ್ಯನ ಹೋಲುವ ಕೂದಲು ಕಾಣಿಸಿತು ಎಂದಿದ್ದಾರೆ ಮನೆಯ ಒಡತಿ. ಟ್ವೀಟರ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 19 ಸಾವಿರ ಮಂದಿ ನೋಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.