ಸರ್ದಾರ್ಜಿ ವೇಷ ಧರಿಸಿದ್ದ ಸೌರವ್ : ವೇಷ ಮರೆಸಿಕೊಂಡು ದಾದಾ ಮಾಡಿದ್ದೇನು..?

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಂಗಾಳದ ಹುಲಿ, ‘ ಪ್ರಿನ್ಸ್ ಆಫ್ ಕೋಲ್ಕತಾ ‘ ಎಂದೇ ಖ್ಯಾತಿಯಾದವರು. ಮಾಜಿ ಎಡಗೈ ಬ್ಯಾಟ್ಸಮನ್ ಸೌರವ್ ಗಂಗೂಲಿ ಹಿಂದೊಮ್ಮೆ ಸಿಖ್ ಸರ್ದಾರ್ಜಿ ವೇಷ ಧರಿಸಿದ್ದರಂತೆ.

ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೊನೆಯ ದಿನ ದುರ್ಗಾ ಮೂರ್ತಿಯನ್ನು ಗಂಗಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಬಂಗಾಳದ ಜನರ ಪಾಲಿಗೆ ದುರ್ಗಾ ಪೂಜಾ ವಿಶೇಷ ಮಹತ್ವವನ್ನು ಹೊಂದಿದೆ. ಜನಸಾಮಾನ್ಯರ ಕಣ್ಣು ತಪ್ಪಿಸಿ ಈ ದುರ್ಗಾ ವಿಸರ್ಜನೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಸೌರವ್ ಸರ್ದಾರ್ಜಿ ವೇಷ ಧರಿಸಿದ್ದರಂತೆ.

ಮಾಜಿ ನಾಯಕ ಸೌರವ್ ಗಂಗೂಲಿ ‘ ಸೆಂಚುರಿ ಈಸ್ ನಾಟ್ ಇನಫ್ ‘ ಎಂಬ ಪುಸ್ತಕವನ್ನು ಬರೆದಿದ್ದು, ಪ್ರಕಟಣೆಗೊಂಡು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಪುಸ್ತಕದಲ್ಲಿ ಸೌರವ್ ತಾವು ಹಿಂದೊಮ್ಮೆ ವೇಷ ಧರಿಸಿದ್ದ ಸಂದರ್ಭದ ಬಗ್ಗೆ ಬರೆದಿದ್ದಾರೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.