ಭಜ್ಜಿಯ ಕ್ಷಮೆ ಕೇಳಿದ ಸೌರವ್ ಗಂಗೂಲಿ : ದಾದಾ ಮಾಡಿದ ತಪ್ಪೇನು..?

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಸ್ಪಿನ್ನರ್ ಹರಭಜನ್ ಸಿಂಗ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ದಾದಾ ಅಂತಹ ಗಂಭೀರ ತಪ್ಪನ್ನೇನು ಮಾಡಿಲ್ಲ. ಆದರೆ ಸ್ವಲ್ಪ ಕನ್ಫ್ಯೂಸ್ ಆಗಿದ್ದಾರೆ ಅಷ್ಟೇ. ಹರಭಜನ್ ಸಿಂಗ್ ತಮ್ಮ ಹೆಂಡತಿ ಗೀತಾ ಬಸ್ರಾ ಹಾಗೂ ಮಗಳು ಹಿನಾಯಾ ಜೊತೆಗೆ ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ತೆರಳಿರುವ ಫೋಟೊ ಅನ್ನು ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೆ ರಿಪ್ಲೈ ಮಾಡಿದ್ದ ಸೌರವ್ ಗಂಗೂಲಿ, ‘ ನಿನ್ನ ಮಗ ತುಂಬ ಸುಂದರನಾಗಿದ್ದಾನೆ ಭಜ್ಜಿ. ಅವನಿಗೆ ತುಂಬ ಪ್ರೀತಿಯನ್ನು ಕೊಡು ‘ ಎಂದು ಟ್ವೀಟ್ ಮಾಡಿದ್ದರು.

ಕೆಲ ಸಮಯದ ಬಳಿಕ ಅದು ಮಗ ಅಲ್ಲ ಭಜ್ಜಿಯ ಮಗಳು ಎಂದು ಗೊತ್ತಾಗಿ, ‘ ಕ್ಷಮಿಸು, ನಿನ್ನ ಮಗಳು ತುಂಬ ಸುಂದರಳಾಗಿದ್ದಾಳೆ. ನನಗೆ ವಯಸ್ಸಾಗುತ್ತಿದೆ ಭಜ್ಜಿ ‘ ಎಂದು ಟ್ವೀಟ್ ಮಾಡಿದ್ದಾರೆ.

ಹರಭಜನ್ ಸಿಂಗ್ ಕ್ರಿಕೆಟ್ ಕರಿಯರ್ ರೂಪುಗೊಳ್ಳುವಲ್ಲಿ ನಾಯಕನಾಗಿ ಸೌರವ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಹಲವಾರು ವರ್ಷ ಟೀಮ್ ಇಂಡಿಯಾದಲ್ಲಿ ಒಟ್ಟಾಗಿ ಆಡಿರುವ ಭಜ್ಜಿ ಹಾಗೂ ದಾದಾ ನಡುವಿನ ಬಾಂಧವ್ಯಕ್ಕೆ ಟ್ವಿಟರ್ ಸಾಕ್ಷಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.