ಆಸ್ಪತ್ರೆಯ ವಾಶ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮಗ…!

25 ವರ್ಷದ ಮಾಜಿ ಕಾರ್ಪೊರೇಟರ್ ಮಗ ಜುಹುವಿನ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವಾಶ್‍ರೂಮಿನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಅಂಕಿತ್ ರೈ ಆತ್ಮಹತ್ಯೆಗೆ ಶರಣಾದ ಯುವಕ. ಅಂಕಿತ್ ಮೃತದೇಹವನ್ನು ಕುಟುಂಬದವರು ಮತ್ತು ಆಸ್ಪತ್ರೆಯ ಸಿಬ್ಬಂದಿ ಆತನಿದ್ದ ವಾರ್ಡಿನ ವಾಶ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಅಂಕಿತ್ ಮಾಜಿ ಕಾರ್ಪೊರೇಟರ್ ಮನೋಜ್ ರೈ ಅವರ ಪುತ್ರನಾಗಿದ್ದು, ಈತ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಅಂಕಿತ್ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆತ ಎಲ್ಲರ ರೀತಿ ವರ್ತಿಸುತ್ತಿರಲಿಲ್ಲ. ಹೀಗಾಗಿ ಆತನನ್ನು ನಾಲ್ಕು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಂಕಿತ್ ವಾಶ್‍ರೂಮಿನಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಕುಟುಂಬದವರು ಆಸ್ಪತ್ರೆಗೆ ಬಂದಿದ್ದಾರೆ. ಆಗ ಸುಮಾರು 7.30ಕ್ಕೆ ಆಸ್ಪತ್ರೆಯ ಸಿಬ್ಬಂದಿ ಜೊತೆ ಕುಟುಂಬದವರು ಅಂಕಿತ್ ವಾರ್ಡಿಗೆ ಹೋಗಿದ್ದಾರೆ. ಆದರೆ ಆತ ಅಲ್ಲಿ ಕಾಣಿಸಲಿಲ್ಲ. ನಂತರ ವಾಶ್‍ರೂಮಿನಲ್ಲಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಕುಟುಂಬದವರು ಫೋನ್ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಜುಹು ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿಯ ಜೊತೆ ವಿಚಾರಣೆ ಮಾಡಿದ್ದಾರೆ. ನಂತರ ಅಂಕಿತ್ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯಕ್ಕೆ ಅಂಕಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಜುಹು ಪೊಲೀಸರು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

7 thoughts on “ಆಸ್ಪತ್ರೆಯ ವಾಶ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮಗ…!

  • ಆಗಷ್ಟ್ 5, 2019 at 11:52 ಫೂರ್ವಾಹ್ನ
    Permalink

    [url=https://prednisone50.com/]buy prednisone[/url] [url=https://lasix80.com/]lasix[/url] [url=https://phenergan125.com/]phenergan 12.5[/url] [url=https://buspar5.com/]buspirone price[/url] [url=https://hydrochlorothiazide125.com/]hydrochlorothiazide 12.5[/url] [url=https://lipitor40.com/]lipitor 40[/url] [url=https://wellbutrin24.com/]wellbutrin[/url] [url=https://prednisolone2.com/]prednisolone sodium[/url] [url=https://atenolol100.com/]atenolol 50 mg[/url] [url=https://viagra200.com/]buy viagra online[/url] [url=https://tetracycline24.com/]tetracycline[/url] [url=https://proscar5.com/]proscar[/url] [url=https://bupropion300.com/]bupropion sr generic[/url] [url=https://vardenafil24.com/]buy vardenafil online[/url] [url=https://femaleviagra2.com/]cialis for women[/url] [url=https://metformin750.com/]metformin[/url] [url=https://albendazole200.com/]albendazole[/url] [url=https://furosemide40.com/]furosemide 20mg[/url] [url=https://seroquel100.com/]seroquel 100[/url] [url=https://vermox500.com/]mebendazole tablets[/url]

    Reply

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.