ಬ್ಯೂಟಿ, ಪರ್ಸನಲಾಟಿ ಇಲ್ಲ ಅಂತ ರಿಜೆಕ್ಟ್ ಆಗಿದ್ರಂತೆ ಸ್ಮೃತಿ

ನೀನು ಸುಂದರವಾಗಿಲ್ಲ, ಒಳ್ಳೆಯ ಪರ್ಸನಾಲಿಟಿಯೂ ಇಲ್ಲ. ಯೂ ಆರ್ ರಿಜೆಕ್ಟೆಡ್

ಸೀರಿಯಲ್ ಲೋಕದಲ್ಲಿ ದೇಶ ಮೆಚ್ಚಿದ ಸೊಸೆಯಾಗಿ ಕಾಣಿಸಿಕೊಂಡು, ಅದೃಷ್ಟದಾಟದಲ್ಲಿ ಕೇಂದ್ರ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡವರು ಸ್ಮೃತಿ ಇರಾನಿ. ಅದ್ಯಾಕೋ ಮಾನವ ಸಂಪನ್ಮೂಲ ಸಚಿವೆಯಾಗಿ ಸದಾ ವಿವಾದಗಳಿಂದಾಗಿಯೇ ಸುದ್ದಿಯಾದ ಸ್ಮೃತಿ ಇರಾನಿ, ಎರಡೇ ವರ್ಷಕ್ಕೆ ಆ ಖಾತೆಯಿಂದಲೇ ಎತ್ತಂಗಡಿಯಾಗಿದ್ದು ತಿಳಿದೇಯಿದೆ.

ಅಂಥ ಪವರ್ ಫುಲ್ ಪೋಸ್ಟ್ ನಲ್ಲಿರುವ ಸ್ಮೃತಿ ಹಿಂದೊಮ್ಮೆ ತಮ್ಮ ರೂಪದಿಂದಾಗಿಯೇ ಅವಕಾಶವೊಂದನ್ನ ಕಳೆದುಕೊಂಡಿದ್ದರಂತೆ. ಹಾಗಂತ ಇದು ಹೊಸ ವಿವಾದವೇನಲ್ಲ. ಈ ವಿಷಯವನ್ನ ಬಹಿರಂಗಪಡಿಸಿರೋದು ಕೂಡಾ ಖುದ್ದು ಸ್ಮೃತಿ ಇರಾನಿಯೇ.

SMRITI IRANI

ಇದು ತುಂಬಾ ಹಳೆಯ ಕಥೆ. ಆಗ ತಾನೇ ಕಾಲೇಜು ಮುಗಿಸಿ ಕೆಲಸಕ್ಕೆ ಓಡಾಡುತ್ತಿದ್ದ ಸ್ಮೃತಿ ಅವರಿಗೆ ಜೆಟ್ ಏರವೇಸ್ ನಿಂದ ಬುಲಾವ್ ಬಂದಿತ್ತಂತೆ. ಇಂಟರ್ ವ್ಯೂಗೆ ಹೋಗಿದ್ದ ಸ್ಮೃತಿಯವರನ್ನ ನೋಡಿದ ಜೆಟ್ ಏರ್ ವೇಸ್ ನವರು ನಿಮಗೆ ಗುಡ್ ಪರ್ಸನಾಲಿಟಿ ಇಲ್ಲ. ನಿಮ್ಮನ್ನ ಕ್ಯಾಬೀನ್ ಕ್ರ್ಯೂ ಹುದ್ದೆಗೆ ಪರಿಗಣಿಸುವದಕ್ಕೆ ಆಗೋಲ್ಲ ಅಂದಿದ್ದರಂತೆ. ಹಾಗೇ ಜೆಟ್ ಏರ್ ವೇಸ್ ನಿಂದ ರಿಜೆಕ್ಟ್ ಆದ ಸ್ಮೃತಿ ಅವರಿಗೆ ತದನಂತರ ಮ್ಯಾಕ್ ಡೋನಾಲ್ಡ್ ನಲ್ಲಿ ಕೆಲಸ ಸಿಕ್ಕಿತ್ತು. ಮುಂದೇ ಆಗಿದ್ದೆಲ್ಲಾ ತಿಳಿದಿರೋ ಯಶಸ್ಸಿನ ನಾಗಾಲೋಟವೇ.

ಆವತ್ತು ತಮ್ಮನ್ನ ರಿಜೆಕ್ಟ್ ಮಾಡಿದ್ದ ಜೆಟ್ ಏರ್ ವೇಸ್ ಗೆ ಈ ಮೂಲಕ ಸ್ಮೃತಿ ಅವರು ಥ್ಯಾಂಕ್ಸ್ ಹೇಳಿದ್ರು. ಒಂದು ವೇಳೆ ಆವತ್ತು ನನಗೆ ಆ ಅವಕಾಶ ಸಿಕ್ಕಿದ್ರೆ, ಈ ಮಟ್ಟಕ್ಕೆ ಬೆಳೆಯೋದಿಕ್ಕೆ ಸಾಧ್ಯವೇ ಆಗುತ್ತಿರಲಿಲ್ಲವೇನೋ ಅಂತ ಆ ದಿನಗಳನ್ನ ನೆನಪಿಸಿಕೊಂಡ್ರು ಕೇಂದ್ರ ಮಂತ್ರಿ. ಇಂಟ್ರಸ್ಟಿಂಗ್ ಸಂಗತಿಯೆಂದ್ರೆ ಅವರು ಈ ವಿಷಯ ಬಹಿರಂಗಪಡಿಸಿದ್ದು ಏರ್ ಪ್ಯಾಸೆಂಜರ್ ಅಸೋಸೊಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಟ್ ಏರ್ ವೇಸ್ ಅಧಿಕಾರಿಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ.

Comments are closed.