ಸಿದ್ದರಾಮಯ್ಯ ಸರಕಾರ ಭ್ರಷ್ಟರ, ಗೂಂಡಾಗಳ ರಾಜ್ಯವಾಗಿದೆ : ಆರ್. ಅಶೋಕ್

ಮಾಜಿ ಸಚಿವ ಆರ್ ಅಶೋಕ್ ವಿಧಾನ ಸೌದದಲ್ಲಿ ಸುದ್ದಿ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ‘ಬೆಂಗಳೂರು ಅಪರಾಧಿಗಳ ಸ್ವರ್ಗವಾಗಿದೆ. ಇಲ್ಲಿ ಅಪರಾಧಿಗಳನ್ನು ಸಿದ್ಧಪಡಿಸಿ‌ ಬೇರೆ ರಾಜ್ಯಕ್ಕೆ ಕಳುಹಿಸಿ ಕೊಡುವಂತಾಗಿದೆ. ಇಲ್ಲಿ ಗಾಂಜಾ , ಅಫೀಮು ಸಂಗ್ರಹಿಸಿ ಇಡಲಾಗುತ್ತಿದೆ ‘ ಎಂದಿದ್ದಾರೆ.

‘ ವಿದ್ವತ್ ಮೇಲೆ ಮೊಹಮ್ಮದ್ ನಲ್ಪಾಡ್ ಮಾಡಿರುವ ಹಲ್ಲೆ ಅಮಾನವೀಯವಾಗಿದೆ. ವಿದ್ವತ್ ಆಘಾತದಿಂದ ಹೊರಬರಲಾಗುತ್ತಿಲ್ಲ. ಎದೆಯ ಎಂಟು ಮುಳೆಗಳು ಮುರಿದಿವೆ. ಮೂಗಿನ ಎರಡು ಮೂಳೆ ಮುರಿದಿವೆ. ಇಷ್ಟೊಂದು ಗಂಭೀರ ಹಲ್ಲೆ ಮಾಡಿರುವುದನ್ನು ನೋಡಿದ್ರೆ ಅವರೆಲ್ಲಾ ನಸೆಯಲ್ಲಿದ್ದರು ಎಂಬುದು ತಿಳಿದು ಬರುತ್ತದೆ ‘

‘ ಸರ್ಕಾರ ಹೊಟೆಲ್ ನಲ್ಲಿ ನಡೆದ ಘಟನೆಯ ಸಿಸಿಟಿವಿ ಕ್ಯಾಮರಾ ಫುಟೇಜ್ ಬಿಡುಗಡೆ ಮಾಡಬೇಕು. ನಿನ್ನೆ ಕಾಂಗ್ರೆಸ್ ಮುಖಂಡ ಸರ್ಕಾರಿ ಕಚೇರಿಯಲ್ಲಿ ಪೆಟ್ರೊಲ್ ಹಾಕಿ ಕಚೇರಿ ಸುಡಲು ಹೋಗಿದ್ದಾರೆ. ಅಲ್ಲಿನ ಅಧಿಕಾರಿಗಳು ಇವರ ಬಳಿ‌ ಲಂಚ ಕೇಳಿದ್ದಕ್ಕೆ ಕಚೇರಿ ಗೆ ಬೆಂಕಿ ಹಚ್ಚಲು ಹೊಗಿದ್ದಾರೆ. ಸರ್ಕಾರದಲ್ಲಿ ಕಮಿಷನ್ ಧಂದೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಾರಾಯಣ್ ಸ್ವಾಮಿ ಬಳಿ ಅಧಿಕಾರಿಗಳು ಕೇಳಿದ ಕಮಿಷನ್ ಬಗ್ಗೆ ಮಾತಾಡಿರುವ ದ್ವನಿ ಸುರುಳಿ ಇದೆ ‘

‘ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಗುಂಡಾಗಿರಿ ನಡೆಯುತ್ತಾ ಬಂದಿದೆ. ಈಗ ಮತ್ತೆ ಮುಂದು ವರೆದಿದೆ. ಕಾನೂನು ಸುವ್ಯವಸ್ಥೆ ಗುಂಡಾಗಳ ಕೈಯಲ್ಲಿದೆಯಾ , ಪೊಲೀಸರ ಕೈಯಲ್ಲಿದೆಯಾ ? ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ, ಗುಂಡಾಗಳ, ರಾಜ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರ ದೌರ್ಭಾಗ್ಯದ ಸರ್ಕಾರವಾಗಿದೆ ‘ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.