ಮುಂಬೈನಿಂದ ಶಿರಡಿಗೆ ಅತೃಪ್ತ ಶಾಸಕರು ಬರ್ತಿದ್ದಂತೆ ಪ್ರತಿಭಟನೆ ಬಿಸಿ ಜೋರು..

ಮುಂಬೈನಿಂದ ಅತೃಪ್ತ ಶಾಸಕರು ಶಿರಡಿಗೆ ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಅತೃಪ್ತ ಶಾಸಕರು ಬರ್ತಿದ್ದಂತೆ ಪ್ರತಿಭಟನೆ ಬಿಸಿ ತಟ್ಟಿದೆ. ಮಹಾರಾಷ್ಟ್ರದ ಯೂ ತ್ ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ರು.

ಶಿರಡಿಸಾಯಿಬಾಬಾ ನಿಮಗೆ ಬುದ್ಧಿ ನೀಡ್ಲಿ. ರಾಜೀನಾಮೆ ವಾಪಸ್ ಪಡೆಯುವ ಮನಸ್ಸು ನೀಡಲಿ ಎಂದು ಫ್ಲೆಕ್ಸ್ ಹಾಕಿದ್ದಾರೆ. ಪ್ರತಿಭಟನೆ ಮಧ್ಯೆಯೇ ಶಾಸಕರು ಶಿರಡಿ ದೇವಸ್ಥಾನಕ್ಕೆ ತೆರಳಿದ್ದಾರೆ. ನಿನ್ನೆಯೂ ದೇವಸ್ಥಾನಕ್ಕೆ ತೆರಳಿದ್ದ ಶಾಸಕರಿಗೆ ಪ್ರತಿಭಟನೆ ಬಿಸಿ ತಟ್ಟಿತ್ತು. ಇಂದು ಶಿರಡಿಗೆ ಹೋಗಿರುವ ಶಾಸಕರು, ನಾಳೆಯೂ ಟೆಂಪಲ್ ರನ್ ಮುಂದುವರೆಸಲಿದ್ದಾರೆ.

ಇತ್ತ ಕರ್ನಾಟಕದಲ್ಲಿ ಅತೃಪ್ತ ಶಾಸಕರ ಮನವೊಲಿಕೆ ಯತ್ನ ಮುಂದುವರೆದಿದೆ. ಸಿದ್ಧರಾಮಯ್ಯ ಮನೆಯಲ್ಲಿ ಈಗ ಮಾತುಕತೆ ನಡೆಯುತ್ತಿದೆ. ಬೆಳಿಗ್ಗೆ ನಾಗರಾಜು ಮನೆಯಲ್ಲಿ 7 ಗಂಟೆಗಳ ಕಾಲ ಮಾತುಕತೆ ನಡೆದಿತ್ತು. ಈಗ ಮಾತುಕತೆ ಸಿದ್ಧರಾಮಯ್ಯ ಮನೆಗೆ ಶಿಫ್ಟ್ ಆಗಿದೆ.

ಮನವೊಲಿಕೆ ಯತ್ನ ನಡೆಸಿದ್ದ ಡಿ.ಕೆ.ಶಿವಕುಮಾರ್, ನಾಗರಾಜು ಅವ್ರನ್ನು ಸಿದ್ಧರಾಮಯ್ಯ ಮನೆಗೆ ಕರೆ ತಂದಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.