ಸೆಹ್ವಾಗ್ ಶತಕ ವಂಚಿಸಲು ಶ್ರೀಲಂಕಾ ನಡೆಸಿದ ಕುತಂತ್ರಕ್ಕೆ ಆರು ವರ್ಷ

ನವದೆಹಲಿ: ಭಾರತದ ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ  ಸೆಹ್ವಾಗ್ ಅವರ ಶತಕ ತಪ್ಪಿಸಲು ಶ್ರೀಲಂಕಾ ನಡೆಸಿದ ಕುತಂತ್ರಕ್ಕೆ ಈಗ ಆರು ವರ್ಷ. ಆರು ವರ್ಷಗಳ ಹಿಂದೆ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವೆ ಏಕದಿನ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಈ ಅಹಿತಕರ ಘಟನೆ ನಡೆಯಿತು.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ೪೬.೧ ಓವರ್‌ಗಳಲ್ಲಿ ಕೇವಲ ೧೭೦ ರನ್‌ಗೆ ಆಲೌಟ್ ಆಗಿತ್ತು. ಗೆಲ್ಲಲು ಭಾರತ ನಿಗದಿತ ೫೦ ಓವರ್‌ಗಳಲ್ಲಿ ೧೭೧ ರನ್ ಸೇರಿಸುವ ಗುರಿ ಪಡೆದಿತ್ತು.  ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ದಿನೇಶ್ ಕಾರ್ತಿಕ್ ಕೇವಲ ಹತ್ತು ರನ್ ಮಾಡಿ ಔಟಾದರು. ನಂತರ ಬಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬೇಗನೆ ನಿರ್ಗಮಿಸಿದರು.

sevag

 

ಆದರೆ ಸೆಹ್ವಾಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ೩೫.೩ ಓವರ್‌ಗಳಲ್ಲಿ ೧೭೦ ರನ್ ಮಾಡಿತ್ತು. ಆಗ ಸೆಹ್ವಾಗ್ ೯೯ ರನ್‌ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದರು. ಆಗ ಬೌಲಿಂಗ್ ಮಾಡಿದ ಸೂರಜ್ ರಣದೀವ್ ಸೆಹ್ವಾಗ್ ಅವರ ಶತಕ ತಪ್ಪಿಸಲು ಉದ್ದೇಶಪೂರಕವಾಗಿ ನೋಬಾಲ್ ಎಸೆದರು. ಭಾರತವೇನೋ ಗೆದ್ದಿತು. ಆದರೆ ಸೆಹ್ವಾಗ್ ಶತಕ ತಪ್ಪಿತು.

ಈ ಘಟನೆಯ ನಂತರ ಆಗ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದ ಕುಮಾರ ಸಂಗಕ್ಕರ, ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದರು. ವೀರೇಂದ್ರ ಸೆಹ್ವಾಗ್ ಹೇಳಿಕೆಯೊಂದನ್ನು ನೀಡಿ ತಂಡ ಬೋನಸ್ ರನ್‌ನಿಂದ ಗೆಲುವು ಸಾಧಿಸಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಆರು ವರ್ಷಗಳ ಹಿಂದೆ ನಡೆದ ಘಟನೆಯನ್ನು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ.

Comments are closed.