ಜಮ್ಮು ಕಾಶ್ಮೀರದಲ್ಲಿ ಆರೆಸ್ಸೆಸ್ ನಾಯಕನ ಮೇಲೆ ಉಗ್ರ ದಾಳಿ, ಭದ್ರತಾ ಸಿಬ್ಬಂದಿ ಬಲಿ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಆಸ್ಪತ್ರೆಯೊಳಗೆ ನುಗ್ಗಿ ಆರೆಸ್ಸೆಸ್ ನಾಯಕ ಚಂದ್ರಕಾಂತ್ ಶರ್ಮಾ ಅವರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ತೀವ್ರವಾಗಿ ಗಾಯಗೊಂಡ ಶರ್ಮಾ ಅವರ ಭದ್ರತಾ ಸಿಬ್ಬಂದಿ (ಪಿಎಸ್ಒ) ಅಸುನೀಗಿದ್ದಾರೆ. ಶರ್ಮಾ ಅವರು ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಾಳಿಯಲ್ಲಿ ಶರ್ಮಾ ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತ್ಯಕ್ಷ ಸಾಕ್ಷಿಯೊಬ್ಬರ ಪ್ರಕಾರ, ಬಂದೂಕುಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯೊಳಗೆ ನುಗ್ಗಿ ಶರ್ಮಾ ಹಾಗೂ ಪಿಎಸ್ಒ ಅವರ ಮೇಲೆ ಗುಂಡಿನ ಮಳೆಗರೆದಿದ್ದಾನೆ.
ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಕಿಶ್ತ್ವಾರ್‌ನಲ್ಲಿ ಕರ್ಫ್ಯೂ ಹೇರಲಾಗಿದೆ ಹಾಗೂ ಇಂಟರ್ನೆಟ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಕಳೆದ ವರ್ಷವೂ ಕಿಶ್ತ್ವಾರ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪಾರಿಹಾರ್ ಹಾಗೂ ಅವರ ಸೋತರ ಅಜಿತ್ ಅವರನ್ನು ಉಗ್ರರು ಗುಂಡು ಹಾರಿಸಿ ಕೊಂದಿದ್ದರು.
ಇದಕ್ಕೂ ಮುನ್ನ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ನಾಯಕರಿಬ್ಬರನ್ನೂ ಉಗ್ರರು ಶ್ರೀನಗರದಲ್ಲಿ ಹತ್ಯೆಗೈದಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.