ಭಾರತ ತಂಡದಲ್ಲಿ ಬಿಸಿ ಬಿಸಿ ಚರ್ಚೆ : 2023ರ ವಿಶ್ವಕಪ್‍ಗೆ ರೋಹಿತ್ ಶರ್ಮಾನೇ ನಾಯಕ…?

ಅದ್ಭುತ ಪ್ರದರ್ಶನದ ಹೊರತಾಗಿಯೂ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಮೆಂಟ್‍ನಿಂದ ನಿರ್ಗಮಿಸಿದ ಭಾರತ ತಂಡದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಶೀಘ್ರದಲ್ಲಿಯೇ ರಿವ್ಯೂ ಮೀಟಿಂಗ್ ಸಹ ನಡೆಯಲಿದ್ದು 2023ರ ವಿಶ್ವಕಪ್‍ಗೆ ಈಗಿನಿಂದಲೇ ತಯಾರಿ ಆರಂಭಿಸುವ ನಿಟ್ಟಿನಲ್ಲಿ ನಾಯಕತ್ವವನ್ನು ಎರಡು ವಿಭಾಗಗಳಾಗಿ ವಿಭಾಗಿಸಿ ಏಕದಿನ ಕ್ರಿಕೆಟ್ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ.

ಭಾರತ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಉಳಿದ್ಯಾವ ಆಟಗಾರರು ಬ್ಯಾಟಿಂಗ್‍ನಲ್ಲಿ ಸ್ಥಿರತೆಯ ಪ್ರದರ್ಶನ ನೀಡಿಲ್ಲ. ಇದರ ಕುರಿತು ಕೂಡಲೇ ತಲೆಕೆಡಿಸಿಕೊಳ್ಳಬೇಕಿದೆ. ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳೆಲ್ಲವೂ ಈಗಾಗಲೇ ಸಿದ್ದತೆಯಲ್ಲಿದ್ದಾರೆ, ನಾವು ಕೂಡ ಸಿದ್ದರಾಗಬೇಕೆಂದು ಚರ್ಚೆ ನಡೆಯುತ್ತಿದೆ.

ಆದರೆ ಇದರಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ವೈಮನಸ್ಸು ಉಂಟಾಗಬಹುದೆಂದು ತಂಡದ ಕೋಚ್ ರವಿಶಾಸ್ತ್ರಿಯವರು ಅಭಿಪ್ರಾಯಪಟ್ಟಿದ್ದು ಮುಂದಿನ ವಿಮರ್ಶೆಯ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗುವುದು ಎಂದಿದ್ದಾರೆ.

2023ರ ವಿಶ್ವಕಪ್ ಅನ್ನು ಭಾರತವು ಸ್ವತಂತ್ರವಾಗಿ ಆಯೋಜಿಸಲಿದೆ. ಇದುವರೆಗೂ ಭಾರತ ನೆರೆಹೊರೆಯ ರಾಷ್ಟ್ರಗಳ ನೆರವಿನೊಂದಿಗೆ ವಿಶ್ವಕಪ್ ಆಯೋಜನೆ ಮಾಡುತ್ತಿತ್ತು. ಆದರೆ ಮುಂದಿನ ಬಾರಿ ಮಾತ್ರ ಸ್ವತಂತ್ರವಾಗಿ ಭಾರತದಲ್ಲಿಯೇ ವಿಶ್ವಕಪ್ ಆಯೋಜನೆ ಮಾಡಲಿದೆ. 2023ರ ಫೆಬ್ರವರಿ 9ರಿಂದ ಮಾರ್ಚ್ 26ರವರೆಗೆ ನಡೆಯಲಿದೆ.

ಆಯೋಜಕರಿಗೆ ಚಾಂಪಿಯನ್ ಪಟ್ಟ

ಕಳೆದ ಮೂರು ಬಾರಿಯಿಂದಲೂ ಆಯೋಜಿಸಿದವರೆ ವಿಶ್ವಕಪ್ ಜಯಿಸಿದ್ದಾರೆ. 2011ರಲ್ಲಿ ಭಾರತ ಮತ್ತು ನೆರೆಹೊರೆ ರಾಷ್ಟ್ರಗಳು ಆಯೋಸಿದ್ದಾಗ ಭಾರತ ಚಾಂಪಿಯನ್ ಆಗಿತ್ತು. 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆಯೋಜಿಸಿದ್ದವು. ಆ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಈಗ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿದೆ. ಮುಂದೆ 2023ರಲ್ಲಿ ಭಾರತ ಆತಿಥ್ಯ ವಹಿಸುತ್ತಿದ್ದ ಭಾರತವೇ ಗೆಲ್ಲುತ್ತದೆ ಎಂದು ಕಾದು ನೋಡಬೇಕಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.