ರಮೇಶ್ ಪೊವಾರ್ ಕೋಚ್ ಅವಧಿ ಅಂತ್ಯ – ಮಹಿಳಾ ತಂಡದ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಶುಕ್ರವಾರ ಅರ್ಜಿಗಳನ್ನು ಆಹ್ವಾನಿಸಿದೆ. ಸದ್ಯದ ಕೋಚ್ ರಮೇಶ್ ಪೊವಾರ್ ಅವರ ಅವಧಿ ಮುಕ್ತಾಯಗೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.

ಟಾಮ್ ಮೂಡಿ, ಡೇವ್ ವ್ಯಾಟ್ಸಮೋರ್ ಅಥವಾ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಇವರ ಹೆಸರುಗಳನ್ನು ಭಾರತ ಮಹಿಳಾ ತಂಡದ ನೂತನ ಮುಖ್ಯ ಕೋಚ್ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿದೆ.

ಟಿ-20 ವಿಶ್ವಕಪ್ ಟೂರ್ನಿಯ ವೇಳೆ, ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಸಿಓಎ ಸದಸ್ಯೆ ಡಯಾನಾ ಎಡುಲ್ಜಿ ಹಾಗೂ ರಮೇಶ್ ಪೊವಾರ್ ನಡುವಿನ ಮನಸ್ತಾಪ, ಪರಸ್ಪರರ ಮೇಲಿನ ದೋಷಾರೋಪಗಳಿಂದ ಮಹಿಳಾ ಕ್ರಿಕೆಟ್ ನಲ್ಲಿ ವಿವಾದವೊಂದು ಸೃಷ್ಟಿಯಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.