CM ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ : ರಂಭಾಪುರಿ ಶ್ರೀ

 

ಹುಬ್ಬಳ್ಳಿ : ಜಗದ್ಗುರು ರಂಭಾಪುರಿ ಶ್ರೀಗಳು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ. ನಾಗಮೋಹನ ದಾಸ್ ಸಮಿತಿ‌ ವರದಿ ಕೇಂದ್ರಕ್ಕೆ ಶಿಫಾರಸ್ಸು ವಿಚಾರವಾಗಿ ಮಾತನಾಡಿದ ಅವರು ‘ ಮುಖ್ಯಮಂತ್ರಿಗಳು ಧರ್ಮ ಒಡೆಯುವ ಕೆಲಸ‌ ಮಾಡಿದ್ದಾರೆ. ಲಿಂಗಾಯತ ವೀರಶೈವ ಧರ್ಮವನ್ನ ಛೀದ್ರ ಮಾಡಿದ್ದರೆ ಇವರಿಗೆ ಜನರು ತಕ್ಕಪಾಠ ಕಲಿಸುತ್ತಾರೆ ‘

‘ ಅತ್ಯಂತ ಅವೈಜ್ಞಾನಿಕ, ಹಾಗೂ ರಾಜಕೀಯ ಪ್ರೇರಿತರಾಗಿ ನಿರ್ಧಾರ ಕೈಗೊಂಡಿದ್ದಾರೆ. ಅತ್ಯಂತ ಶೀಘ್ರದಲ್ಲೇ, ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಧರ್ಮ, ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಸಮಾಜದ ಪ್ರಜ್ಞಾವಂತ ಜನರು ಸರ್ಕಾರಕ್ಕೆ‌ ಪಾಠ ಕಲಿಸಲಾಗುವುದು ‘

‘ ಕಾನೂನು ದೃಷ್ಟಿಯಿಂದ ನಾವು ಹೋರಾಟಕ್ಕೆ ಸಿದ್ದರಾಗುತ್ತಿದ್ದೇವೆ. ಮುಖ್ಯಮಂತ್ರಿಗಳು ಕೈವಾಡದಿಂದಲೇ ಇದೆಲ್ಲ ನಡೆದಿದೆ. ರಾಜಕೀಯವಾಗಿ ಸಮಾಜ ಹೊಡೆಯುವ ಕೆಲಸ ಸಿಎಂ ಮಾಡಿದ್ದಾರೆ. ಲಿಂಗಾಯತ ಸಮಾಜವನ್ನ ಛಿದ್ರಮಾಡಿ, ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದಗಿನಿಂದ ಈ ಕೆಲಸ‌ ನಡೆದಿದೆ ‘ ಎಂದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.