ಪತಿಯ ಅನಾರೋಗ್ಯಕ್ಕೆ ಬೇಸತ್ತ ಪತ್ನಿ ಮಕ್ಕಳೊಂದಿಗೆ ಆತ್ಮಹತ್ಯೆ

ವಾಸಿಯಾಗದ ಪತಿಯ ಖಾಯಿಲೆಗೆ ಬೇಸತ್ತ ಹೆಂಡತಿ ತನ್ನ ಎಳೆಯ ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಳಿಯ ಅಪ್ಪಗೆರೆ ಬಳಿ ಈ ಘಟನೆ ನಡೆದಿದ್ದು, 27 ವರ್ಷದ ರೇಖಾ ತನ್ನ  ಇಬ್ಬರು ಮಕ್ಕಳಾದ ನೂತನ್ (7) ಮಾನ್ಯ (5)ರೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪತಿ ನವೀನ್ ಜಾಂಡೀಸ್ ಖಾಯಿಲೆಯಿಗೆ ತುತ್ತಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚಾಗಿದ್ದರು ವಾಸಿಯಾಗಿರಲಿಲ್ಲ. ಗಂಡನ ಚಿಕಿತ್ಸೆಗೆಂದು ಸುಮಾರು ಸಾಲ ಮಾಡಲಾಗಿತ್ತು. ಇಷ್ಟೇಲ್ಲಾ ಚಿಕಿತ್ಸೆ ಕೊಡಿಸಿದಾಗಲೂ ಪತಿ ಗುಣಮುಖವಾಗದಿರುವದರಿಂದ ರೇಖಾ ತುಂಬಾ ನೊಂದಿದ್ದಳು ಎನ್ನಲಾಗುತ್ತಿದೆ. ಒಂದು ವೇಳೆ ಪತಿ ತೀರಿಕೊಂಡ ನಂತರ ಬದುಕು ನಡೆಸುವುದು ಕಷ್ಟವಾಗಬಹುದು ಎನ್ನುವ ಭಯಕ್ಕೆ ಆತ್ಮಹತ್ಯೆಯ ಮೊರೆ ಹೋಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಚನಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.