ಪುಲ್ವಾಮಾ ದಾಳಿ : 22ರಂದು ಮುಸ್ಲಿಮ ಸಮುದಾಯದಿಂದ ಬೃಹತ್ ಮೆರವಣಿಗೆ..

ಜಮ್ಮುವಿನ ಪುಲ್ವಾಮಾದಲ್ಲಿ ನಡೆದ ಯೋಧರ ಹತ್ಯೆ ಖಂಡಿಸಿ ಫೆ.22 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯನ್ನು ಇಡೀ ಮುಸ್ಲಿಂ ಸಮಾಜ ಖಂಡಿಸಿದೆ. ಹೀಗಾಗಿ ಶುಕ್ರವಾರ ನಮಾಜ್ ಸಲ್ಲಿಸಿದ ಬಳಿಕ, ಡಿಸಿ ಕಚೇರಿಯವರೆಗೆ ಮರೆವಣಿಗೆ ನಡೆಸಿ, ಉಗ್ರರು ಹಾಗೂ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಹಾಗೂ ಹುತಾತ್ಮ ಸೈನಿಕರ ಕುಟುಂಬದ ಜೊತೆ ಇಡೀ ಮುಸ್ಲಿಂ ಸಮಾಜವಿದೆ. ಪಾಕಿಸ್ತಾನದ ಪರ ಇದ್ದವರು ನಮ್ಮ ಸಮಾಜಕ್ಕೆ ಸಂಬಂಧವೇ ಇಲ್ಲ. ಅವರ ವಿರುದ್ಧ ಬೇಕಾದ ಕಠಿಣ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಹಮತವಿದೆ. ನಮ್ಮ ಬೆಂಬಲವೂ ಇದೆ ಎಂದರು.

ದೇಶಭಕ್ತಿ ನಮಗೂ ಇದೆ. ಇದರಲ್ಲಿ ಎರಡೂ ಮಾತಿಲ್ಲ. ಯಾವುದೇ ಧರ್ಮದಲ್ಲಿರುವ ಕೆಲ ಕೆಟ್ಟ ಹುಳುಗಳಿದ್ದು, ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ. ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

ಸಮಾಜದ ಮುಖಂಡರಾದ ನಝೀರ ಮನಿಯಾ, ಇಮ್ರಾನ ಕಳ್ಳಿಮನಿ, ಸಮೀರ ಪಾಗೆ, ಇರ್ಫಾನ್ ತಾಡಪತ್ರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.