ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ನಿರಾಸೆ ಹೊಂದಿದ ಪ್ರಜ್ಞೇಶ್ ಗುಣೇಶ್ವರನ್

ಭಾರತದ ಸ್ಟಾರ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.

ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ 3-6, 6-7 ರಿಂದ ಇವೊ ಕಾರ್ಲೋವಿಕ್ ವಿರುದ್ಧ ಸೋಲು ಅನುಭವಿಸಿದರು. ಎರಡು ಎಟಿಪಿ ಚಾಂಲೆಂಜ್ ಟೂರ್ನಿಯನ್ನು ಗೆದ್ದಿರುವ ಭಾರತದ ನಂಬರ್ ಒನ್ ಆಟಗಾರ ಪ್ರಜ್ಞೇಶ್ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು. ಎದುರಾಳಿ ಆಟಗಾರನ ನಡೆಯನ್ನು ಅರಿಯುವಲ್ಲಿ ವಿಫಲರಾದ ಪ್ರಜ್ಷೇಶ್ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು.

ಮೊದಲ ಸೆಟ್ ನಲ್ಲಿ ಅಂಕಗಳ ಬೇಟೆಯಲ್ಲಿ ಹಿನ್ನಡೆ ಅನುಭವಿಸಿದ್ದ ಪ್ರಜ್ಞೇಶ್ ಎರಡನೇ ಸುತ್ತಿನಲ್ಲಿ ಜಿದ್ದಾಜಿದ್ದಿನ ಫೈಟ್ ನೀಡಿ ಗಮನ ಸೆಳೆದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ 6-4, 6-7, 7-6 ರಿಂದ ವಿಶ್ವದ 17ನೇ ಶ್ರೇಯಾಂಕಿತ ನಿಕೊಲೊಜ್ ಬಸಿಲಾಶ್ವಿಲಿ ಅವರನ್ನು ಮಣಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.